January 29, 2026

ದಾರವಾಡ-ಎಸ್ ಜೆ ಎಮ್ ವಿ ಮಹಾಂತ ಪ್ರಥಮ ದರ್ಜೆ ಕಲಾ ವಾಣಿಜ್ಯ ಮಹಾವಿಧ್ಯಾಲಯದಲ್ಲಿ  ಪ್ರಸಕ್ತ ವರುಷ 2025-26ನೇ ಸಾಲಿನ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹುಬ್ಬಳ್ಳಿ-ಧಾರಾವಾಡ ಪೊಲೀಸ್ ಆಯುಕ್ತರಾದ ಏನ್. ಶಶಿಕುಮಾರ್ ಅವರು ಮಾತನಾಡುತ್ತಾ, ಸಮಯದ ಕುರಿತು ಅರಿವಿರಲಿ, ಸಮಯವನ್ನು ಗೌರವಿಸಿದರೆ, ಅದು ನಿಮ್ಮನು ಗೌರವಿಸುತ್ತದೆ. ಸಮಯ ನಿರ್ವಹಣೆ ಮಾಡಿ. ಚೆನ್ನಾಗಿ ಓದಿ, ಜೀವನದಲ್ಲಿ ನಿರಂತರ ಪ್ರಯತ್ನ ವಿರಲಿ. ಕಲಿಸಿದ ಗುರು ಗಳು,ತಂದೆ -ತಾಯಿಗೆ ಕೀರ್ತಿ ತನ್ನಿ. ಯಶಸ್ಸಿಗೆ ಶಾರ್ಟ್ ಕಟ್ ಬೇಡ. ನಿಶ್ಚಿತ ಗುರಿ ಇರಲಿ. ಅದರತ್ತnನಿಮ್ಮ ಪ್ರಯತ್ನ ವಿರಲಿ, ಹಿಂದೆ ಗುರು ಇರಲಿ, ಮುಂದೆ ಗುರಿ ಇರಲಿ.ಶ್ರಮಪಟ್ಟು ಓದಿದರೆ ಯಶಸ್ಸು ನಿಮ್ಮ ಬೆನ್ನು ಹತ್ತುತ್ತದೆ. ಯಶಸ್ಸಿನ ಪಯಣದಲ್ಲಿ ಶ್ರಮವಿರಲಿ. ವ್ಯಕ್ತಿತ್ವ ಪರಿಪೂರ್ಣತೆಯನ್ನು ಬೆಳೆಸಿಕೊಳ್ಳಿ. . ಓದಿನ ಜೊತೆಗೆ ಬರವಣಿಗೆ, ಮಾತು, ಸಂವಹನ ಕೌಶಲ್ಯ ಗಳನ್ನು ಬೆಳೆಸಿಕೊಳ್ಳಿ. ಮಹಾವಿಧ್ಯಾಲಯದ ಕಾರ್ಯಕ್ರಮ ಗಳಲ್ಲಿ ಬಾಗವಹಿಸಿ. ವೇದಿಕೆಗಳ ಸದುಪಯೋಗ ಪಡಿಸಿಕೊಳ್ಳಿ. ನಾಯಕತ್ವ ಗುಣ ಬೆಳೆಸಿಕೊಳ್ಳಿ. ಪ್ರಯತ್ನ ನಿಮ್ಮನ್ನು ಯಶಸ್ಸಿನ ತ್ತ ಕೊಂಡೋಯ್ಯುತ್ತದೆ. ಸಮಗ್ರ ಪರಿಪೂರ್ಣ ವ್ಯಕ್ತಿತ್ವ ನಿಮ್ಮದಾಗಲಿ. ತಮ್ಮಲ್ಲಿ ಕೃತಜ್ಞತಾ ಮನೋಭಾವನೆಯಿರಲಿ. ಓದುವ ಜೀಲ್ ಇರಲಿ. ಜೀವನದಲ್ಲಿ ಯೋಚಿಸಿ ಹೆಜ್ಜೆಯಿಡಿ. ನಿಮ್ಮ ಭವಿಷ್ಯದ ದಿನಗಳಲ್ಲಿ ಯೋಜನಯಿರಲಿ.ನಿಮ್ಮಲ್ಲಿ ಆತ್ಮ ವಿಶ್ವಾಸ ವಿರಲಿ. ಭವಿಷ್ಯದ ಪ್ರಜೆಗಳಾಗಿ ದೇಶದ ಕುರಿತು ಚಿಂತಿಸಿ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿ ಕೊಳ್ಳಿಎನ್ನುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದ ಮಹಾವಿಧ್ಯಾಲಯದ ಪ್ರಾಚಾರ್ಯರಾದ ಡಾ. ರಾಜಶೇಖರಪ್ಪ ಎಮ್. ಅವರು ಮಾತನಾಡುತ್ತಾ ಸಾಧನೆಗೆ ಕಠಿಣ ಪರಿಶ್ರಮದ ಅವಶ್ಯಕತೆಯಿದೆ. ತಮ್ಮ ಗುರಿ ಹಾಗೂ ಗುರುಗಳ ಮಾರ್ಗದರ್ಶನದಿಂದ ಭವಿಷ್ಯದ ಬದುಕನ್ನು ಕಂಡುಕೊಳ್ಳಿ. ಇಂತಹ ವೇದಿಕೆಗಳ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಳ್ಳಿ. ಸರಳತೆಯನ್ನು ಮೈಗೂಡಿಸಿಕೊಳ್ಳಿ. ಅರ್ಥಪೂರ್ಣ ಕಾರ್ಯಕ್ರಮ ಎನ್ನುತ್ತಾ ಒಕ್ಕೂಟದ ಕಾರ್ಯಧ್ಯಕ್ಷರು,ಪ್ರಾಧ್ಯಾಪಕ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಛೇರ್ಮನ್ ರಾದ ಪ್ರೊ. ಎಮ್. ಬಿ. ಅಳಗವಾಡಿ, ಐ ಕ್ಯೂ ಎ ಸಿ ಸಂಯೋಜಕರಾದ ಪ್ರೊ. ಸಿ. ಕೆ ಹುಬ್ಬಳ್ಳಿ, ಡಾ. ಪುಷ್ಪಾ ಬಸನಗೌಡರ, ಪ್ರೊ. ಕೆ. ಎಸ್. ಮೇಲಮಾಳಗಿ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗಳಾದ ಮದು ಹೊಸಳ್ಳಿ, ಲಕ್ಷ್ಮೀ ಕುಬಸದ ಉಪಸ್ಥಿತರಿದ್ದರು.

ಆರಂಭದಲ್ಲಿ ವಿದ್ಯಾರ್ಥಿನಿಯರಾದ ಸಂಗೀತಾ, ವಿಜಯಲಕ್ಷ್ಮೀ, ಮಧು, ನಾಗವೇಣಿ ಪ್ರಾರ್ಥಿಸಿದರು. ಏನ್ ಎಸ್ ಎಸ್ ಸಂಯೋಜಕರಾದ ಡಾ.ತೇಜಶ್ವಿನಿ ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿಯರ ಸಂಘದ ಸಂಯೋಜಕರಾದ ಪ್ರೊ. ಜೆ. ಪಿ. ಯಂಡಿಗೇರಿ ವಂದಿಸಿದರು.

ಕಾರ್ಯಕ್ರಮದಲ್ಲಿ ಮಹಾವಿಧ್ಯಾಲಯದ ಸಮಸ್ತ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!