ಹುಬ್ಬಳ್ಳಿ:ಹುಬ್ಬಳ್ಳಿಯ ರೈಲ್ವೆ ನಿಲ್ದಾಣದ ಹತ್ತಿರದ ರಾಜಗೋಪಾಲ ನಗರದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ನಮಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡು ಎಂದು ದಲಿತ ಸಂಘರ್ಷ ಸಮಿತಿಯು ಜಿಲ್ಲಾಧಿಕಾರಿಗಳ ಮೊರೆಹೋಗಿದೆ.
ಅಷ್ಟೇ ಅಲ್ಲದೆ ಕರ್ನಾಟಕ ಸರ್ಕಾರವು ರಾಜಗೋಪಾಲ್ ನಗರದ 4 ಎಕರೆ ಜಾಗವನ್ನು ಕೋಳಚೆ ಪ್ರದೇಶ ಎಂದು ಘೋಷಿಸಿದ್ದು, ಕೆಲವು ವರ್ಷಗಳ ಹಿಂದೆ ರೈಲ್ವೆ ಅಧಿಕಾರಿಗಳು ಸದರಿ ಜಾಗವು ನಮಗೆ ಸೇರಿದ್ದು ಎಂದು ಸುಮಾರು 120 ಗುಡಿಸಲುಗಳನ್ನು ನೆಲಸಮ ಮಾಡಿದ ಘಟನೆಗಳ ಕೂಡ ನಡೆದಿದೆ ಎಂದು ಸಮಿತಿಯು ಜಿಲ್ಲಾಧಿಕಾರಿಯವರಿಗೆ ಪತ್ರದ ಮೂಲಕ ತಿಳಿಸಿದೆ.
ಸುಮಾರು 72 ವರ್ಷಗಳಿಂದ ದಲಿತ ಆಡಳಿತದಲ್ಲಿ ನಡೆದುಕೊಂಡು ಬಂದಂತಹ ಹರಿಜನ ಕನ್ನಡ ಗಂಡು ಮಕ್ಕಳ ಶಾಲೆಯು ಸಹ ಇದೆ ಜಾಗದಲ್ಲಿ ಇರುತ್ತದೆ. ಶಾಲೆಯಲ್ಲಿಯೂ ಮೂಲಸೌಕರ್ಯಗಳ ಕೊರತೆ ತುಂಬಾ ಹೆಚ್ಚಾಗಿದೆ ಆದ್ದರಿಂದ ತಾವು ಇದನ್ನು ವೀಕ್ಷಣೆ ಮಾಡಿ ಪರಿಶೀಲಿಸಿ ದಲಿತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದೆ.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಶಿವಶಂಕರ್ ಭಂಡಾರಿ, ಹಾಗೂ ಹರಿಜನ್ ಹಿತವರ್ಧಕ ಸಂಘದ ಪದಾಧಿಕಾರಿಗಳು ಹಾಜರಿದ್ದರು.
