December 1, 2025

ಹುಬ್ಬಳ್ಳಿ: ಹೆಸ್ಕಾಂನ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ಹೆಸ್ಕಾಂ ಆಧ್ಯಕ್ಷರಾದ ಸೈಯದ್‌ ಅಜೀಮ್‌ಪೀರ್‌ ಎಸ್‌ ಖಾದ್ರಿ ಅವರು ವಿತರಿಸಿದರು.

ವಿಜಯಪುರದ ನಿಡಗುಂದಿ ಹೆಸ್ಕಾಂ ಕಚೇರಿಯಲ್ಲಿ ಮೇಲ್ವಿಚಾರಕರಾಗಿ ಕರ್ತವ್ಯ ನಿಭಾಯಿಸುತ್ತಿದ್ದ ಶಿವಪ್ಪ ದೇವಪ್ಪ ದೇವರಗುಡಿ ಅವರು ಕರ್ತವ್ಯದ ವೇಳೆ ನಿಧನರಾಗಿದ್ದರು. ಈಗ ಅನುಕಂಪದ ಆಧಾರದ ಮೇಲೆ ಅವರ ಪತ್ನಿ ಸವಿತಾ ಶಿವಪ್ಪ ದೇವರಗುಡಿ ಅವರಿಗೆ ಸಹಾಯಕ ಹುದ್ದೆ ನೀಡಿ ನೇಮಕಾತಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಹೆಸ್ಕಾಂನ ಪ್ರಧಾನ ವ್ಯವಸ್ಥಾಪಕರು (ಆ ಮತ್ತು ಮಾ.ಸಂ.ಅ) ಮೊಹಮ್ಮದ ಖಿಜರ್‌,‌ ಹೆಸ್ಕಾಂ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ವಿನಾಯಕ ಪಾಲನಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!