ಹುಬ್ಬಳ್ಳಿ
ಪ್ರತಿಯೊಂದು ಹಬ್ಬಕ್ಕೂ ಒಂದು ವಿಶಿಷ್ಟ ಅರ್ಥವಿದೆ. ಆದರೆ ಗಣೇಶ ಚತುರ್ಥಿಯಂತ ಹಬ್ಬ, ಸಮಾಜವನ್ನು ಒಂದೇ ಮಂಚದಲ್ಲಿ ಸೇರಿಸುವ ಶಕ್ತಿ ಹೊಂದಿದೆ. ಇದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಹಳೆ ಹುಬ್ಬಳ್ಳಿ ಪೊಲೀಸ ಠಾಣೆ.

ಈ ವರ್ಷದ 2025ರ ಗಣೇಶೋತ್ಸವವನ್ನು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯವರು ಅದ್ದೂರಿಯಾಗಿ, ಶ್ರದ್ಧೆಯಿಂದ ಹಾಗೂ ಸಮಾಜಮುಖಿ ಮನೋಭಾವದಿಂದ ಆಚರಿಸಿದರು.

ಗಜಾನನನಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದ ನಂತರ, ಪೊಲೀಸ್ ಸಿಬ್ಬಂದಿ ಹಾಗೂ ಇನ್ಸ್ಪೆಕ್ಟರ್ಗಳಾದ ಮಲ್ಲಿಕಾರ್ಜುನ್ ಸಿಂಧೂರ್ ಹಾಗೂ ಸಬ್ ಇನ್ಸ್ಪೆಕ್ಟರ್ ಗಳಾದ ಸಾತೆನವರ್ ಹಾಗೂ ವಿಶ್ವನಾಥ ಆಲಮಟ್ಟಿ ರಂಗುರಂಗಾದ ಉಡುಪುಗಳಲ್ಲಿ ಭಾಗವಹಿಸಿ, ತಮ್ಮ ಮಾನವೀಯ ಮುಖವನ್ನು ತೋರಿಸಿದರು.
ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಅನ್ನಪ್ರಸಾದ ವಿತರಣೆಯಾಯಿತು. ಬಡವರ ಮುಖದಲ್ಲಿ ಮೂಡಿದ ಸಂತೋಷ, ಅವರ ಹಸಿವನ್ನು ಶಮನಿಸಿದ ಆ ಕ್ಷಣಗಳು, ಸದಾ ಕಠಿಣವಾಗಿ ಕಾಣುವ ಪೋಲಿಸ್ ಇಲಾಖೆಯವರ ಒಂದು ಮೃದುವಾದ ಪಾರ್ಶ್ವವನ್ನು ತೋರಿಸಿತು.

ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್‌ಗಳು, ಸಿಬ್ಬಂದಿಗಳು, ಮತ್ತು ಅವರ ಕುಟುಂಬದ ಸದಸ್ಯರು ಸಹ ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಸಮಾಜ ಮತ್ತು ಸೇವೆಯ ನಡುವೆ ಬಲವಾದ ನಂಟನ್ನು ಪ್ರತಿಬಿಂಬಿಸಿದ್ದಾರೆ.

ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಈ ರೀತಿಯ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಯಲಿ ಎಂಬುದು ಎಲ್ಲರ ಹಾರೈಕೆ.
“ವಕ್ರತುಂಡ ಮಹಾಕಾಯ, ಸೂರ್ಯಕೋಟಿ ಸಮಪ್ರಭ..!
ನಿರ್ವಿಘ್ನಂ ಕುರೂ ಮೇ ದೇವ, ಸರ್ವಕಾರ್ಯೇಷು ಸರ್ವದಾ..!”
