ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ದೇಶ ಬೆಳೆಯುತ್ತಿರುವಾಗ ಕಾಲೆಳೆಯುವ ಕೆಲಸ ಮಾಡುವವೆಉ ಹತ್ತಾರು ಜನ ಇರುತ್ತಾರೆ ಅಂತಹವರನ್ನು ಬೇಧಿಸಿ ಮುನ್ನುಗ್ಗಿದರೆ ಮಾತ್ರ ನಾವು ವಿಕಸಿತ ಭಾರತದ ಗುರಿ ತಲುಪಬಹುದು ಎಂದು ಹಿರಿಯ ಚಲನಚಿತ್ರ ನಟ ಹಾಗೂ ವಿಂಗ್ ಕಮ್ಯಾಂಡರ್ ಎಚ್.ಜೆ ದತ್ತಣ್ಣ ತಿಳಿಸಿದರು.

ಪೀಣ್ಯ ಕೈಗಾರಿಕಾ ಸಂಘದ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ 79 ನೇ ಸ್ವಾತಂತ್ರ್ಯೋತ್ಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ದತ್ತಣ್ಣ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ನೆಮ್ಮಲ್ಲರ ಪೂರ್ವಜರು ಪಾಲ್ಗೊಂಡು ನಮಗೆ ಸ್ವಾತಂತ್ರ್ಯ ಕೊಡಿಸಿ ಸಾವನ್ನಪ್ಪಿದ್ದಾರೆ. ಅವರ ಋಣವನ್ನು ತೀರಿಸುವ ಕೆಲಸವನ್ನು ನಾವು ಇವತ್ತು ಮಾಡಬೇಕಾಗಿದೆ ಅಲ್ಲದೇ ಅದನ್ನು ನಮ್ಮ ಮುಂದಿನ ಪೀಳಿಗೆಗೆ ಕೊಡುವಂತಹ ಕೊಡುಗೆಯಾಗಿದ್ದು ಅದನ್ನು ಈ ಸಂದರ್ಭದಲ್ಲಿ ಸಂಕಲ್ಪ ಮಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡು ಸಾವನ್ನಪ್ಪಿದ್ದ ನಮ್ಮವರ ಋಣ ತೀರಿಸುವ ಕೆಲಸ ಮಾಡೋಣ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ದೇಶಕ್ಕೆ ದ್ರೋಹ ಮಾಡುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ ಆ ಕೆಲಸವನ್ನು ನಾವು ಈಗಾಗಲೇ ಮಾಡಿ ತೋರಿಸಿದ್ದೇವೆ ಎಂದು ಆಪರೇಷನ್ ಸಿಂಧೂರದ ಬಗ್ಗೆ ಆಕ್ರೋಶ ಭರಿತರಾಗಿ ಮಾತನಾಡಿದರು.
ಇನ್ನೂ ಏಷ್ಯಾ ಖಂಡದಲ್ಲೇ ಅತಿದೊಡ್ಡ ಕೈಗಾರಿಕಾ ಪ್ರದೇಶದಲ್ಲಿ ಕನ್ನಡಿಗರಿಗೆ ಉದ್ಯೋಗ ಯಾಕೆ ಸಿಗುತ್ತಿಲ್ಲ ಎಂದರೆ ಅಲ್ಲಿ ಶೇಕಡಾ 40 ಕನ್ನಡಿಗರು ಮಾತ್ರ ಇದ್ದು ಉಳಿದ ಶೇಕಡಾ 60 ಹೊರರಾಜ್ಯದವರೇ ಉದ್ಯೋಗಿಗಳಾಗಿದ್ದಾರೆ ಇದು ಕನ್ನಡದವರ ದುರಾದೇಷ್ಟಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಧ್ವಜಾರೋಹಣದ ನಂತರ ನಿಸರ್ಗ ಕಾಲೇಜ್ ವಿದ್ಯಾರ್ಥಿಗಳ ಜೊತೆ ಸಂಘದ ಪದಾಧಿಕಾರಿಗಳು, ಕೈಗಾರಿಕೋದ್ಯಮಿಗಳು ಟಿವಿಎಸ್ ಕ್ರಾಸ್ ಮೂಲಕ ಪಥಸಂಚಲನ ನಡೆಸಿದರು.
ಚಲನಚಿತ್ರ ನಟರು ಹಾಗೂ ವಿಂಗ್ ಕಮ್ಯಾಂಡರ್ ಎಚ್.ಜಿ.ದತ್ತಾತ್ರೇಯ,
ಮಾಜಿ ಸೈನಿಕರಾದ ಪಿಜಿಕೆ ನಾಯರ್, ಕ್ಯಾಪ್ಟಮ್ ವರ್ಗೀಸ್, ಎ.ವಿಶ್ವನಾಥಯ್ಯ, ಉದ್ಯಮಿ ಡಾ.ತಿಮ್ಮಪ್ಪ ಎಸ್.ಕೆ, ಹೇಮಂತ್‌ಜೇನುಕಲ್ಲು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪೀಣ್ಯ ಕೈಗಾರಿಕಾ ಸಂಘದ ಅದ್ಯಕ್ಷ ದಾನಪ್ಪ ಡಿ.ಪಿ, ಹಿರಿಯ ಉಪಾಧ್ಯಕ್ಷ ಪಾಟೀಲ್ ಡಿ.ಎಚ್, ಉಪಾದ್ಯಕ್ಷ ಚಂದ್ರಶೇಖರ್. ಎಂ, ಕಾರ್ಯದರ್ಶಿ ಬೀರಪ್ಪ. ಬಿ, ಜಂಟಿ ಕಾರ್ಯದರ್ಶಿ ತಿಮ್ಮಯ್ಯ.ಬಿ, ಖಜಾಂಚಿ ಎ.ಪಿ.ಸೆಲ್ವಕುಮಾರ್, ಜಂಟಿ ಖಜಾಂಚಿ ಎಂ.ಆರ್.ರಂಗಸ್ವಾಮಿ, ನಿಕಟಪೂರ್ವ ಅದ್ಯಕ್ಷ ಆರ್.ಶಿವಕುಮಾರ್, ನಿಕಟಪೂರ್ವ ಕಾರ್ಯದರ್ಶಿ ಮಲ್ಲೇಶ್ ಗೌಡ , ರವೀಗೌಡ, ಉದ್ಯಮಿಗಳಾದ ಎಂ.ಆರ್.ಕೃಷ್ಣಮೂರ್ತಿ, ಶಿವರಾಜು, ಮೀನೇಶ್, ಸೇರಿದಂತೆ ಹಲವಾರು ಉದ್ಯಮಿಗಳು, ವಿದ್ಯಾರ್ಥಿಗಳು ಬಾಗವಹಿಸಿದ್ದರು.
