April 18, 2025

ಪಬ್ಲಿಕ್ ರೈಡ್ ನ್ಯೂಸ್

ಹುಬ್ಬಳ್ಳಿ; ರಾಜ್ಯದ ವಿಧಾನಸೌಧದಲ್ಲಿ ರಾಜ್ಯಸಭಾ ಕಾಂಗ್ರೆಸ್ ವಿಜಯೋತ್ಸವದಲ್ಲಿ ಕೇಳಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಖಂಡಿಸಿ ಹಾಗೂ ಘೋಷಣೆ ಕೂಗಿದವರ ಮೇಲೆ ಕಠಿಣ ಕ್ರಮಕ್ಕೆ ಅಗ್ರಹಿಸಿ, ಹುಬ್ಬಳ್ಳಿ ಎಬಿವಿಪಿ‌ ಕಾರ್ಯಕರ್ತರು ರಸ್ತೆ ತಡೆ ನಡೆಸಿ‌ ತಮ್ಮ ಆಕ್ರೋಶ ಹೊರಹಾಕಿದರು.‌

ನಗರದ ಬಿವಿಬಿ ಕಾಲೇಜು ಮುಂಭಾಗದ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು, ರಾಜ್ಯ ಸರ್ಕಾರದ ಸೇರಿ ದೇಶ ವಿರೋಧಿ‌ ಘೋಷಣೆ ಕೂಗಿದವರ ವಿರುದ್ಧ ಧಿಕ್ಕಾರ ಕೂಗಿ ತಮ್ಮ‌ ಆಕ್ರೋಶ ವ್ಯಕ್ತಪಡಿಸಿದರು. ‌ಇದೇ ಸಂದರ್ಭದಲ್ಲಿ ರಸ್ತೆ ತಡೆ ನಡೆಸಿ ಸರ್ಕಾರ ಮೌನದ ವಿರುದ್ಧ ಅಸಮಧಾನ‌ ವ್ಯಕ್ತ ಮಾಡಿದರು.

ಇತ್ತೀಚಿನ ದಿನಗಳಲ್ಲಿ ದೇಶದ್ರೋಹ ಘೋಷಣೆಯ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ.‌ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ.‌ ಇಷ್ಟುದಿನ ಓಣಿ ಗಲ್ಲಿಗಳಲ್ಲಿ ದೇಶವಿರೋಧಿ ಘೋಷಣೆಗಳು ಕೇಳುತ್ತಿದ್ದವು, ಈಗ ವಿಧಾನಸೌಧದವರೆಗೂ ತಲುಪಿದೆ. ಕಳೆದ ದಿನ ರಾಜ್ಯ ಸಭಾ ಕಾಂಗ್ರೆಸ್‌ನ ಸದಸ್ಯ ನಾಸೀರ ಹುಸೇನ್ ಆಯ್ಕೆಯ ನಂತರ, ವಿಜಯೋತ್ಸವ ನಡೆಯುತ್ತಿರುವ ಸಂದರ್ಭದಲ್ಲಿ ನಾಸೀರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ.‌ ಅದನ್ನು ತಡೆಯುವ ನಿಟ್ಟಿನಲ್ಲಿ ಯಾರು ಕೂಡಾ ಮುಂದಾಗಲಿಲ್ಲ, ಇದು ನಾಚಿಕೆ ಪಡಬೇಕು. ಈ ಕೂಡಲೇ ದೇಶವಿರೋಧಿ ಘೋಷಣೆ ಕೋರರ ಬಂಧನವಾಗಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ‌

Leave a Reply

Your email address will not be published. Required fields are marked *

error: Content is protected !!