ಧಾರವಾಡ
ಧಾರವಾಡ ನಗರದ 5 ನೆ ವಾರ್ಡ್ ಮದಿಹಾಳದ ಮುಖ್ಯ ರಸ್ತೆ ಸರಿ ಪಡಿಸುವಂತೆ ಧಾರವಾಡ ಮಹಾನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗೌರಮ್ಮಾ ಬಲೋಗಿ ಅವರು ಇಂದು ಮಹಾನಗರ ಪಾಲಿಕೆ ಕಮೀಷನರ್ ಡಾ. ರುದ್ರೇಶ್ ಘಾಳಿ ಅವರಿಗೆ ಮನವಿಯನ್ನು ಮಾಡಿಕೊಂಡರು. ಬಳಿಕ ಕಮೀಷನರ್ ಅವರು ಮನವಿಯನ್ನು ಸ್ವೀಕರಿಸಿ ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಡೇವಿ ಬ್ಯಾಳಿ, ನೀಲಮ್ಮ ಹುಂಬಿ, ಸಂಗೀತಾ ತೋರಗಲ್ಲ್ ಇದ್ದರು.
