
ಪಬ್ಲಿಕ್ ರೈಡ್ ನ್ಯೂಸ್
ದಿನಾಂಕ 26-2-24
ಧಾರವಾಡ: ಸ್ಲಗ್ ಲೋಕಸಭಾ ಚುನಾವಣೆ ಸಮೀಪ ಹಿನ್ನಲೆ; ಧಾರವಾಡದಲ್ಲಿ ಬಿಜೆಪಿ ಲೋಕ ಸಭಾ ಕ್ಷೇತ್ರ ಕಾರ್ಯಾಲಯ ಉದ್ಘಾಟನೆ.
ಧಾರವಾಡ; ಲೊಕಸಭಾ ಚುನಾವಣೆ ಸಮೀಪ ಬಂದ ಹಿನ್ನಲೆಯಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿಯಲ್ಲಿ ಬ್ಯೂಸಿಯಾಗಿದ್ದು, ಧಾರವಾಡದಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬಿಜೆಪಿ ಲೋಕಸಭಾ ಕ್ಷೇತ್ರದ ಕಾರ್ಯಾಲಯವನ್ನು ಉದ್ಘಾಟನೆ ಮಾಡಿದರು.
ನಗರದ ಮರಾಠ ಕಾಲೋನಿಯ ಸರೂರು ಬಿಲ್ಡಿಂಗ್ ಮುಂಭಾಗದಲ್ಲಿ ಪಕ್ಷದ ಧ್ವಜ ಏರಿಸುವ ಮೂಲಕ ಕಾರ್ಯಾಲಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಉದ್ಘಾಟನೆ ಮಾಡಿದರು. ಬಳಿಕ ಕಾರ್ಯಾಲಯದಲ್ಲಿ ಧಾರವಾಡ ಜಿಲ್ಲಾ ಬಿಜೆಪಿ ಪ್ರಮುಖರು ಸಭೆ ಮಾಡಿದರು. ಸಭೆಯಲ್ಲಿ ಮಾಜಿ ಲೋಕಸಭಾ ಸದಸ್ಯ ವಿಜಯ ಸಂಕೇಶ್ವರ, ರಾಜ್ಯ ವಿಧಾನಸಭೆಯ ಬಿಜೆಪಿ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಹಾಗೂ ಧಾರವಾಡ ಮಾಜಿ ಶಾಸಕಿ ಸೀಮಾ ಮಸೂತಿ, ಅಮೃತ ದೇಸಾಯಿ ಸೇರಿದಂತೆ ಬಿಜೆಪಿ ಪಕ್ಷದ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದ್ದರು.