
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಡೈರಿ ಸ್ಟಾಪ್ ಹತ್ತಿರ ಇರುವ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ವನ್ನು ಆಯೋಜಿಸಿ ಸ್ಥಳೀಯ ಮುಖಂಡರಾದ ಎಲ್. ರಾಮೇಗೌಡ ಸಮಾಜ ಸೇವಕ ಹಾಗೂ ಏಸ್ ಕಂಪನಿಯ ಉದ್ಯೋಗಿ ಡಾ.ಎಸ್.ಹೆಚ್. ಬಿರಾದರ್ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಆನಂದ್ ಹಾಗೂ ರಾಜಗೋಪಾಲ್ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸೆ ಕ್ಟರ್ ರವಿಕುಮಾರ್ ಶಾಲೆಯ ಸಂಸ್ಥಾಪಕ ಡಾ. ಬಿ ಎಮ್ ಬಳ್ಳಾರಿ ಸೇರಿದಂತೆ ಶಾಲೆಯ ಸಿಬ್ಬಂದಿಗಳು ಸಮಾರಂಭದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಎಲ್ ರಾಮೇಗೌಡರು ವಿದ್ಯಾರ್ಥಿಗಳಿಗೆ ಮೊದಲು ಶಿಸ್ತು ಕಲಿಸಬೇಕು ನಂತರ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸುತ್ತಾರೆ ಎಂದು ತಿಳಿಸಿದರು.
ನಂತರ ಮಾತನಾಡಿದ ಡಾ. ಎಸ್ ಹೆಚ್ ಬಿರಾದರ್ ಮಾತನಾಡಿ ಕಳೆದ ಹಲವು ವರ್ಷಗಳ ಹಿಂದೆ ಚಿತ್ರಕಲೆ, ಶಿಲ್ಪಕಲೆ, ಅಕ್ಷರ ಕಲೆಯಿಂದ ಶಿಕ್ಷಣ ಪಡೆಯುತ್ತಿದ್ದೆವು ಈಗ ಅಕ್ಷರ ಕಲೆಯಲ್ಲಿ ಹಲವು ಲಿಪಿಗಳಿವೆ ಆದರೆ ಚಿತ್ರಕಲೆ ಹಾಗೂ ಶಿಲ್ಪ ಕಲೆಗಳಲ್ಲಿ ಯಾವುದೇ ಲಿಪಿಗಳಿಲ್ಲ ಆದುದರಿಂದ ಈಗಿನ ಶಿಕ್ಷಣದಲ್ಲಿ ನಾವು ಅಕ್ಷರ ಕಲೆಯನ್ನು ಅಳವಡಿಸಿಕೊಂಡು ವಿದ್ಯೆ ಕಲಿಯುತ್ತಿದ್ದೇವೆ ಪ್ರಸ್ತುತ ಕಾಲಮಾನದಲ್ಲಿ ಎಲ್ಲರೂ ಇಂಗ್ಲೀಷ್ ಭಾಷೆಗೆ ಹೆಚ್ಚು ಓತ್ತು ನೀಡುತ್ತಿದ್ದು ಅದರ ಜೊತೆಗೆ ಕನ್ನಡಕ್ಕೆ ಪ್ರಾಮುಖ್ಯತೆ ನೀಡಿ ಮಕ್ಕಳಿಗೆ ಎಲ್ಲಾ ವಿಷಯಗಳಲ್ಲಿ ಆಸಕ್ತಿ ಬರುವ ಹಾಗೆ ಶಿಕ್ಷಕರು ಹಾಗೂ ಪೋಷಕರು ಗಮನ ಹರಿಸಬೇಕು ಮಕ್ಕಳು ಶಾಲೆಯಲ್ಲಿ ಹೇಳಿದ ಪಾಠ ಪ್ರವಚನವನ್ನು ಮನೆಯಲ್ಲಿ ಅಭ್ಯಾಸ ಮಾಡಿಸುವ ಮೂಲಕ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಪೋಷಕರಿಗೆ ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಶಾಲೆಯ ಸಂಸ್ಥಾಪಕ ಬಿ.ಎಮ್, ಬಳ್ಳಾರಿ ಮಾತನಾಡಿ ವಿದ್ಯೆಗೆ ವಿನಯವೇ ಭೂಷಣ ವಿದ್ಯೆಯನ್ನು ಎಲ್ಲರೂ ಕಲಿಯುತ್ತಾರೆ ಆದರೆ ವಿನಯ ಇಲ್ಲವೆಂದರೆ ಅದು ಯಾವ ಸಾರ್ಥಕತೆನೂ ತರೋದಿಲ್ಲ ಯಾಕೆಂದರೆ ಕೆಲವರು ಚೆನ್ನಾಗಿ ಕಲಿತು ದೊಡ್ಡ ಉದ್ಯೋಗದಲ್ಲಿ ಇರುತ್ತಾರೆ ಆದರೆ ಅವರು ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ ಇಂಥವರಿಗೆ ವಿನಯದ ಬಗ್ಗೆ ತಿಳಿಸಿಕೊಡಬೇಕಾದ ಅವಶ್ಯಕತೆ ಇರುತ್ತದೆ ಆದುದರಿಂದ ವಿದ್ಯೆಯ ಜೊತೆಗೆ ವಿನಯವನ್ನು ಎಲ್ಲ ಮಕ್ಕಳು ರೂಡಿಸಿಕೊಂಡು ಪೋಷಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಿರಿಯರು ಹೇಳಿದ ಮಾತಿನಂತೆ ಗುರುವಿನ ಗುಲಾಮನಾಗುವ ತನಕ ದೊರೆದಣ್ಣ ಮುಕುತಿ ಅಂದರೆ ಗುರುಗಳು ಹೇಳಿದ ಮಾತಿನಂತೆ ನಡೆದರೆ ಜೀವನದಲ್ಲಿ ನಾವು ನಮ್ಮ ಗುರಿ ಮುಟ್ಟಲು ಸಾಧ್ಯ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರವಂತರಾಗಿ ಬೆಳೆಯಬೇಕು ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಿಸ್ತು ಸಂಯಮದ ಜೊತೆಗೆ ಹಲವಾರು ವಿಷಯಗಳು ಜ್ಞಾನ ಬೆಳೆಸಿಕೊಳ್ಳಲು ಹಾಗೂ ಆಸಕ್ತಿ ಹೆಚ್ಚಿಸಿಕೊಳ್ಳಲು ಸಹಾಯವಾಗುವಂತ ಒಳ್ಳೆಯ ವಾತಾವರಣ ಕಲ್ಪಿಸಿ ಬೆಳೆಸುತ್ತೇವೆಎಂದು ತಿಳಿಸಿದರು.
ಈ ವೇಳೆ ಸಂಸ್ಥೆಯ ಯಶಸ್ಸಿಗೋಸ್ಕರ ದುಡಿದಂತ ಶಿಕ್ಷಕ ರಾಧಾ ಶಾಹಿದಾ ಬಾನು ಮೇಘನಾ ರವರಿಗೆ ಗೌರವಿಸಲಾಯಿತು ಇದರ ಜೊತೆ ಹಲವಾರು ಸ್ಪರ್ಧೆ ಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.