
ಹುಬ್ಬಳ್ಳಿ:ಹುಬ್ಬಳ್ಳಿಯ ಗಂಗಾಧರ ನಗರ ಸೆಟ್ನಮೆಂಟನಲ್ಲಿ ಮಧ್ಯ ರಾತ್ರಿ ಗೋಕಾಕ ಕುಟುಂಬ ದಿಂದ ಶರೀನ ಹಾಗೂ ಅವರ ಪತಿಯ ಮೇಲೆ ಹಲ್ಲೆ ನಡೆಸಿದ್ದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಮೇಲೆ ಮೇಲೆ ಶರೀನ ಹಾಗೂ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದ ಗೋಕಾಕ ಕುಟುಂಬದ ಪುಂಡರು ಈಗ ಮಾರಣಾತಿಕವಾಗಿ ಹಲ್ಲೆ ಮಾಡಲು ಮುಂದಾಗಿದ್ದರು ಎಂದು ಆರೋಪಿಸಿದ್ದು, ನಮಗೆ ರಕ್ಷಣೆ ಕೊಡಿ ಎಂದು ಬಸವರಾಜ ಭಜಂತ್ರಿ ಅವರ ಪತ್ನಿ ಶರೀನ ಆಯುಕ್ತ ಎನ್ ಶಶಿಕುಮಾರ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ವಿಡಿಯೊ ಇದೆ ನೋಡಿ
ಘಟನೆ ಬೆಂಡಿಗೇರಿ ಪೊಲೀಸ್ ಠಾಣೆಯ ಸರಹದ್ದಿನ್ನಲ್ಲಿ ನಡೆದಿದೆ, ಪ್ರತಿ ಸಲ ಠಾಣೆಗೆ ದೂರು ನೀಡಿದರು ಇವರ ಮೇಲೆ ಯಾವುದೇ ಕಾನೂನ ಕ್ರಮ ಆಗಿಲ್ಲವಂತೆ, ಠಾಣೆಯಲ್ಲಿ ಎಚ್ಚರಿಕೆ ನೀಡಿದರು ಸಹ ಗೋಕಾಕ ಕುಟುಂಬದಿಂದ ನಿರಂತರ ಕಿರುಕುಳ ನಮಗೆ ತಪ್ಪಿದಲ್ಲ, ನಮಗೆ ರಕ್ಷಣೆ ಕೊಡಿ ಬಸವರಾಜ ಭಜಂತ್ರಿ ಹಾಗೂ ಶರೀನ ಹಾಗೂ ಕುಟುಂಬ ಮನವಿ ಮಾಡಿಕೊಂಡಿದ್ದಾರೆ.