
ಪಬ್ಲಿಕ್ ರೈಡ್ ನ್ಯೂಸ್, ಪೀಣ್ಯ ದಾಸರಹಳ್ಳಿ: ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕಾಳಜಿ ಹೊಂದಿರುವ ನಮ್ಮ ನಾಯಕರಾದ ಕೀರ್ತನ್ ಮಂಜಪ್ಪನವರಿಗೆ ರಾಜಕೀಯವಾಗಿ ಅವಕಾಶಗಳು ಸಿಗಬೇಕು. ಹಾಗೆಯೇ ಭಗವಂತನು ಅವರಿಗೆ ಹೆಚ್ಚಿನ ಆಯುರಾರೋಗ್ಯ, ಐಶ್ವರ್ಯ ಕೊಟ್ಟು ರಾಜಕೀಯವಾಗಿ ಹೆಚ್ಚಿನ ಸ್ಥಾನ ನೀಡಲಿಯೆಂದು ಹಾರೈಸುತ್ತೇನೆ ಎಂದು ಹೆಗ್ಗನಹಳ್ಳಿ ವಾರ್ಡ್ ಕಾಂಗ್ರೆಸ್ ಮುಖಂಡರಾದ ಮೈಕಲ್ ಬಾಬು ಹೇಳಿದರು. ಸಿಡೇದಹಳ್ಳಿಯ ಸೌಂದರ್ಯ ಬಡಾವಣೆಯಲ್ಲಿ ದಾಸರಹಳ್ಳಿ ಕಾಂಗ್ರೆಸ್ ಮುಖಂಡರು ಹಾಗೂ ಸೌಂದರ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಿ.ಇ.ಓ ಕೀರ್ತನ್ ಮಂಜಪ್ಪ ರವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿ ಶುಭಕೋರಿ ಅವರು ಮಾತನಾಡಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡರು ಹಾಗೂ ಸೌಂದರ್ಯ ಸಮೂಹ ಶಿಕ್ಷಣ ಸಂಸ್ಥೆಗಳ ಸಿ.ಇ.ಓ ಕೀರ್ತನ್ ಮಂಜಪ್ಪ ಅವರು, ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ನನಗೆ ಜನರು ನೀಡಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಅವರ ಪ್ರೀತಿಗೆ ನಾನೆಂದಿಗೂ ಚಿರಋಣಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೌಂದರ್ಯ ಮಂಜಪ್ಪ, ಮುಖಂಡರಾದ ಐಸ್ ರವಿ, ಆರ್ಟ್ಸ್ ಶಿವು, ಹೈದರ್ ಆಲಿ, ಮನು ಮುಂತಾದವರು ಉಪಸ್ಥಿತರಿದ್ದರು.