
ಧಾರವಾಡ
ಇಂದು ಸೇವಾ ಭಾರತಿ ಟ್ರಸ್ಟ್ ಮಂಜುನಾನ ಶಿವಪ್ಪ ಮಕ್ಕಳಗೇರಿ ಹಾಗೂ ಗೆಳೆಯರ ವತಿಯಿಂದ ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛತೆ ಮಾಡಲಾಯಿತು.
ಧಾರವಾಡದ ಗಣೇಶ ನಗರ ಮದಿಹಾಳದಲ್ಲಿ ನಗರದ ಸರ್ಕಾರಿ ಕುಡಿಯುವ ನೀರಿನ ಟ್ಯಾಂಕ ಸ್ವಚ್ಛಗೊಳಿಸಿ ಸಮಾಜ ಮುಖಿ ಕಾರ್ಯವನ್ನು ಸೇವಾ ಭಾರತಿ ಟ್ರಸ್ಟ್ ತಂಡ ಇಂದು ಮಾಡಿದೆ.
ಇದಷ್ಟೆ ಅಲ್ಲದೆ ಇವತ್ತಿನ ವರೆಗೂ ನಗರದ ಬೇರೆ ಬೇರೆ ಕಡೆಗಳಲ್ಲಿ 33 ನೀರಿನ ಟ್ಯಾಂಕಗಳನ್ನು ಸ್ವಚ್ಛತೆ ಮಾಡಲಾಗಿದೆ ಎಂದು ಸೇವಾ ಭಾರತಿ ಟ್ರಸ್ಟ್ ನ ಟ್ರಸ್ಟಿ ಮಂಜುನಾಥ ಮಕ್ಕಳಗೇರಿ ತಿಳಿಸಿದರು.
ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿ ಸುಭದ್ರ ಮತ್ತು ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡೋಣ ಎಂದು ಸಮಸ್ತ ನಾಗರಿಕರಿಗೆ ಕರೆ ನೀಡಿದರು.ಈ ಸಂದರ್ಭದಲ್ಲಿ ಗಣೇಶ್ ನಗರ ಮದಿಹಾಳದ ಓಣಿಯ ಗುರುಹಿರಿಯರು ಇದ್ದರು.