
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಸಮೀಪದ ವಿಡಿಯಾ ಸ್ಕೂಲ್ ಬಸ್ ನಿಲ್ದಾಣದ ಹತ್ತಿರ ದಾಸರಹಳ್ಳಿ ಕ್ಷೇತ್ರದ ಬಿಜೆಪಿವತಿಯಿಂದ ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಹ ದಾಳಿಯಲ್ಲಿ ಸಾವಿಗೀಡಾದ ಅಮಾಯಕ ಹಿಂದುಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಭಯೋತ್ಪಾದನೆ ವಿರುದ್ಧ ಪ್ರತಿಭಟನೆ ನಡೆಸಿದರು.
ಶಾಸಕ ಎಸ್. ಮುನಿರಾಜು, ಬಿಜೆಪಿ ಮುಖಂಡರಾದ ಭರತ್ ಸೌಂದರ್ಯ, ಶೆಟ್ಟಿಹಳ್ಳಿ ಸುರೇಶ್, ಎಸ್.ಆರ್.ಮಂಜಣ್ಣ, ಬಿ. ಕೃಷ್ಣಮೂರ್ತಿ, ಉಮಾದೇವಿ ನಾಗರಾಜು, ಸುಜಾತ, ಮೇದರಹಳ್ಳಿ ಸೋಮಶೇಖರ್, ಪಿ.ಎಚ್. ರಾಜು, ನಿಸರ್ಗ ಕೆಂಪರಾಜು, ಗಂಗಾಧರ್, ಗುರುಪ್ರಸಾದ್, ವಿನೋದ್ ಗೌಡ, ಚೊಕ್ಕಸಂದ್ರ ಮಂಜು, ವೆಂಕಟೇಶ್( ವೆಂಕಿ), ವಿಜಯಕುಮಾರ್, ರಘು, ಯತೀಶ್, ಹಿಮಾಚಲಾರೆಡ್ಡಿ ಮುಂತಾದವರಿದ್ದರು.