April 19, 2025

ಧಾರವಾಡ

ನಾಡಿನಾದ್ಯಂತ ಸೋಮುವಾರ ಸಂವಿಧಾನ ಶಿಲ್ಫಿ ಡಾ ‌ಬಾಬಾ ಸಹೇಬ್ ಅಂಬೇಡ್ಕರವರ 134 ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದ್ದು, ಅದೇ ರೀತಿ ಧಾರವಾಡದ ಅಮರಗೋಳದಲ್ಲಿಯು ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣ ಕಾರ್ಯಕ್ರಮದ ಜತೆಗೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ‌

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ಅಮರಗೋಳ ಗ್ರಾಮಸ್ಥರೆಲ್ಲರು ಸೇರಿ ಒಗ್ಗಟ್ಟಿನಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರವರ 134ನೇಯ ಜಯಂತಿಯನ್ನು ಅತ್ಯಂತ ಸಂಭ್ರಮದಿಂದ ಆಚರಣೆ ಮಾಡಿದರು. ಸಂವಿಧಾನ‌ ಶಿಲ್ಫಿ ಜಯಂತಿ ಹಿನ್ನಲೆಯಲ್ಲಿ ಅಮರಗೋಳ ಅಂಬೇಡ್ಕರ್ ಕಾಲೋನಿಯ ನಿವಾಸಿಗಳ ವತಿಯಿಂದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಸಿಬಿರ ನಡೆಸಲಾಯಿತು. ‌ಜತೆಗೆ ಸಂಜೆ ಶ್ರೀ ಮೈತ್ರಿ ವೃದ್ಧಾಶ್ರಮ ನವನಗರ ಹಾಗೂ ಸ್ನೇಹ ಸಂಸ್ಥೆ ವತಿಯಿಂದ ಅಮರಗೋಳದ ನಂದಿ ಬಡಾವಣೆ ನಿವಾಸಿಗಳಿಗೆ ಬೆಡ್ ಶೀಟ್ ವಿತರಣೆ ಮಾಡುವ ಮೂಲಕ ಬಾಬಾ ಸಾಹೇಬರ್ ಜಯಂತಿಯನ್ನು ಅದ್ದೂರಿಯಾಹಿ ನಡೆಸಲಾಯಿತು.

ಸಂಜೆ ಅಮರಗೋಳ‌ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಾಬಾ ಸಹೇಬರ್ ಬೃಹತ್ ಕಟೌಟ್ ಮೇರವಣಿಗೆ ಮಾಡಲಾಗಿದ್ದು, ಈ ವೇಳೆ ಡಿಜೆಯಲ್ಲಿನ ಮಹಾನಾಯಕ ಹಾಡಿಗೆ ಅಮರಗೋಳ ಅಂಬೇಡ್ಕರ್ ಅಭಿಮಾನಿಗಳು ಸಖತ್ ಸ್ಟೆಪ್ ಹಾಕಿ ಸಂಭ್ರಮಿಸಿದರು‌‌. ಇನ್ನೂ ವೇದಿಕೆಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ನವಮಗರ ಎಪಿಎಂಸಿ ಠಾಣೆಯ ಪಿಐ ಸಮ್ಮಿವುಲ್ಲಾ, ಶ್ರೀಗಂಧ ಗಣೇಶ ಶೆಟ್ಟಿ, ಡಾಕ್ಟರೇಟ್ ಅಭಿಷೇಕ ಪಾಟೀಲ್, ಸಂತೋಷ ಸೋಗಿ, ಬಸವರಾಜ್ ಚಳಗೇರಿ, ವಿಜಯ ಮಾದರ ಸೇರಿ ಮಾರುತಿ ಮಾದಾರ ಹಾಗೂ ಅನೇಕ್ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!