
ಧಾರವಾಡ
ಹುಬ್ಬಳ್ಳಿ ಡಿಪೋದಿಂದ ಸರ್ಕಾರಿ ಸಾರಿಗೆ ಬಸ್ಸ ಬಿಡದಿರುವುದನ್ನು ಖಂಡಿಸಿ ಹಾಗೂ ಸಾರಿಗೆ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ, ಧಾರವಾಡ ಹೆಬ್ಬಳ್ಳಿ ಗ್ರಾಮಸ್ಥರು ಮಂಗಳವಾರ ಸಂಜೆ ಗ್ರಾಮದ ಮುಖ್ಯ ಬಸ್ಸ ನಿಲ್ದಾಣದಲ್ಲಿ ಸಾರಿಗೆ ಬಸ್ಸ ತಡೆದು ಪ್ರತಿಭಟನೆ ನಡೆಸಿ ಡಿಪೋ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಗ್ರಾಮದ ಹೆಬ್ಬಳ್ಳಿ ಮುಖ್ಯ ಬಸ್ಸ ನಿಲ್ದಾಣದಲ್ಲಿ ಹುಬ್ಬಳ್ಳಿ ಡಿಪೋ ಅಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಪ್ರತಿಭಟನೆಗೆ ಇಳಿದ ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಹುಬ್ಬಳ್ಳಿ ಸರ್ಕಾರಿ ಸಾರಿಗೆ ಡಿಪೋ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ಬಸ್ಸ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ ಡಿಪೋ ಅಧಿಕಾರಿಗಳಿಗೆ ಅನೇಕ ಬಾರಿ ಮೌಖಿಕವಾಗಿ ಸಾರಿಗೆ ಬಸ್ಸನ ಸಮಸ್ಯೆ ಪರಿಹರಿಸಲು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಡಿಪೋ ಅಧಿಕಾರಿಗಳು ಕ್ಯಾರೆ ಅನ್ನದ ಹಿನ್ನಲೆಯಲ್ಲಿ, ಮಂಗಳವಾರ ಗ್ರಾಮಕ್ಕೆ ಬಂದ್ ಸಾರಿಗೆ ಬಸ್ಸನ್ನು ತಡೆದು ಬಸ್ಸ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮಸ್ಥರ ದಿಢೀರ ಪ್ರತಿಭಟನೆಯಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಾರಿಗೆ ಬಸ್ಸನ ಚಾಲಕರು ಸೇರಿ ನಿರ್ವಾಹಕರು ಪರದಾಡಿದರು. ಇನ್ನೂ ಹುಬ್ಬಳ್ಳಿಗೆ ಹೆಬ್ಬಳ್ಳಿ ಗ್ರಾಮದಿಂದ ದುಡಿಯಲು ಸೇರಿದಂತೆ ಶಿಕ್ಷಣಕ್ಕಾಗಿ ಸಾಕಷ್ಟು ಜನರು ಪ್ರಾಯಣ ಮಾಡುತ್ತಾರೆ. ಎಲ್ಲ ದೃಷ್ಟಿಯಿಂದ ಸಮಸ್ಯೆ ಪರಿಹರಿಸವಂತೆ ಮನವಿ ಮಾಡಿದ್ದಾರೆ, ಆದರು ಸಹ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತು ಗ್ರಾಮಸ್ಥರು ಬೀದಿಗೆ ಇಳಿದು ತಮ್ಮ ಆಕ್ರೋಶ ಹೊರಹಾಕಿದರು. ಆದರೆ ಗ್ರಾಮಸ್ಥರು ಪ್ರಯಿಭಟನೆ ಮಾಡಿದರು ಕೂಡಾ ಹುಬ್ಬಳ್ಳಿ ಡಿಪೋ ಅಧಿಕಾರಿಗಳ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿದರು. ಈ ಕೂಡಲೇ ಹುಬ್ಬಳ್ಳಿ ಹೆಬ್ಬಳ್ಳಿ ಸರ್ಕಾರಿ ಸಾರಿಗೆ ಬಸ್ಸ ಸಮಸ್ಯೆ ಪರಿಹಾರ ಮಾಡಬೇಕು ಇಲ್ಲವಾದ್ದಲ್ಲಿ ಉಗ್ರ ಹೋರಾಟಕ್ಕೆ ಹೆಜ್ಜೆ ಇಡುವುದಾಗಿ ಗ್ರಾಮಸ್ಥರು ಖಡಕ್ ಎಚ್ಚರಿಕೆ ನೀಡಿದ್ದಾರೆ.