
ಧಾರವಾಡ
ರಾಜ್ಯ ಕಾಂಗ್ರೆಸ್ ಸರ್ಕಾರ ಶಾಸಕ ಹಾಗೂ ಮನಿಸ್ಟರ್‌ಗಳ ವೇತನ ಹೆಚ್ಚಿಸಿ ಸಿಹಿ ನೀಡಿದ್ದರೆ, ಅದೇ ಸರ್ಕಾರ ದಿನ ಬಳಕೆ ಬೆಲೆಗಳ ಏರಿಸಿ ಜನರಿಗೆ ಕಹಿ ನೀಡಿರುವುದನ್ನು ಖಂಡಿಸಿ, ಧಾರವಾಡದಲ್ಲಿ ಎಸ್‌ಯುಸಿಐ ಪಕ್ಷ ಪ್ರತಿಭಟನೆ ನಡೆಸಿ ರಾಜ್ಯ ಕೈ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದ ಸುಭಾಷ್ ರಸ್ತೆಯ ವಿವೇಕಾನಂದ ವೃತದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಗ್ಯಾರಂಟಿಗಳ ಪ್ರಚಾರ ಮೂಲಕ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಬೆಲೆಗಳ ಏರಿಕೆಯಲ್ಲಿಯೇ ಹೆಚ್ಚು ಒಲವು ಹೊಂದಿದೆ. ಬಾಂಡ್ ಬೆಲೆ, ಸಾರಿಗೆ ದರ, ಅಲ್ಕೋಹಾಲ್ ಬೆಲೆ ಹೀಗೆ ಈಗ ವಿದ್ಯುತ್ ಬಿಲ್, ಹಾಲಿನ ದರ ಸೇರಿದಂತೆ ಬೆಲೆಗಳ ಏರಿಸುವುದನ್ನೆ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ.
ಕಳೆದ ವಿಧಾನ ಸಭಾ ಅಧಿವೇಶನದಲ್ಲಿ ಶಾಸಕರ ಸಚಿವರುಗಳ ವೇತನ ಹೆಚ್ಚಿಸಿಕೊಂಡು ಸಂಭ್ರಮದಲ್ಲಿದ್ದಾರೆ. ಆದರೆ ಈಗ ಜನರಿಗೆ ಬೆಲೆ ಏರಿಸಿ ಕಹಿ ಯಾಕೆ ನೀಡುತ್ತಿದ್ದಾರೆ. ಹಾಲಿನ ಉತ್ಪಾದನೆಯ ವೆಚ್ಚ ಹೆಚ್ಚಾಗಿದೆ ಎನ್ನುವ ಸರ್ಕಾರ ವೆಚ್ಚ ಸರಿದುಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕು, ಅದನ್ನು ಬಿಟ್ಟು ಹೀಗೆ ಹಾಲಿನ ದರ ವಿದ್ಯೂತ್ ದರ ಏರಿಕೆ ಮಾಡಿದ್ದರೆ, ಮಧ್ಯಮ ವರ್ಗದ ಜನರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನೆ ಮಾಡಿದರು. ಈ ಕೂಡಲೇ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಇಲ್ಲವಾದಲ್ಲಿ ಉಗ್ರಹೋರಾಟದ ಕಡೆ ನಾವು ಹೆಜ್ಕೆ ಹಾಕಬೇಕಾಗುತ್ತದೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.