
ಧಾರವಾಡ
ಸರಾಯಿ ಕುಡಿ ನಶೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬ ಮಲಗಿದ್ದ ಜಾಗದಲ್ಲಿಯೇ ಪ್ರಾಣ ಬಿಟ್ಟಿರುವ ಘಟನೆ, ಧಾರವಾಡ ಸುಭಾಷ್ ರಸ್ತೆಯ ಹೂವಿನ ಮಾರಕಟ್ಟೆಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಧಾರವಾಡ ಹೊಸಯಲ್ಲಾಪುರ ನಗರದ ನಿವಾಸಿ ಈರಣ್ಣ ಪರಸಪ್ಪಾ ಸಂದಿವಾಡ್( 40) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಮೃತ ಈರಣ್ಣ ಇಂದು ಮುಂಜಾನೆ ಮದ್ಯಪಾನ ಮಾಡಿದ್ದನಂತೆ. ನಶೆಯಲ್ಲಿ ನಡೆದುಕೊಂಡು ಹೊಗಲಾಗದೇ ಅಲ್ಲಿಯೇ ಮಲಗಿದ್ದನಂತೆ ಎಂದು ಸ್ಥಳೀಯರಿಂದ ತಿಳಿದು ಬಂದಿದೆ.
ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಶಹರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮೃತ ವ್ಯಕ್ತಿಯ ಮೃತದೇಹವನ್ನು ಸ್ಥಳಿಯರ ಸಹಾಯದೊಂದಿಗೆ ಜಿಲ್ಲಾಸ್ಪತ್ರೆಗೆ ರವಾನಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.