
ಪಬ್ಲಿಕ್ ರೈಡ್ ಧಾರವಾಡ
ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ರಸ್ತೆ ಪಕ್ಕಕ್ಕೆ ಜಾರಿ ಅಪಘಾತವಾದ ಘಟನೆ ಧಾರವಾಡ ಸವದತ್ತಿ ರಸ್ತೆಯ ಹಾದಿ ಬಸವಣ್ಣ ದೇವಸ್ಥಾನ ಬಳಿ ನಡೆದಿದ್ದು, ಅನಾಹುತವೊಂದು ತಪ್ಪಿದೆ.
ಧಾರವಾಡ ಸವದತ್ತಿ ಮಾರ್ಗವಾಗಿ ಧಾರವಾಡದಿಂದ ಮರೆವಾಡ ಗ್ರಾಮಕ್ಕೆ ಸಾರಿಗೆ ಬಸ್ಸ ಪ್ರಯಾಣಿಕರನ್ನು ಕರೆದುಕೊಂಡು ತೆರಳುತಿತ್ತು. ಈ ಸಂದರ್ಭದಲ್ಲಿ ಹಾದಿ ಬಸವಣ್ಣ ದೇವಸ್ಥಾನ ಬಳಿ ಬರುತ್ತಿದಂತೆ ಸರ್ಕಾರಿ ಸಾರಿಗೆ ಬಸ್ಸ ಚಾಲಕನ ನಿಯಂತ್ರ ತಪ್ಪಿ ರಸ್ತೆ ಪಕ್ಕದ ಕಂದಕಕ್ಕೆ ಜಾರಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದವೇಳೆ ಈ ದುರ್ಘಟನೆ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ ಘಟನೆ ನಡೆಯುತ್ತಿದಂತೆ ಸ್ಥಳೀಯ ವಾಹನ ಸವಾರರು ಪ್ರಯಾಣಿಕರ ರಕ್ಷಣೆಗೆ ಮುಂದಾಗಿ ಎಲ್ಲರನ್ನು ಬಸ್ಸಿನಿಂದ ಕೆಳಗಿಳಿಸಿ ಧೈರ್ಯ ಹೇಳಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.