
ಹುಬ್ಬಳ್ಳಿ
ಬಿರು ಬಿಸಿಲಿನಲ್ಲಿ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿ ವಿತರಣೆ ಮಾಡಿ ಮಾನವೀಯತೆ ಮೆರೆದ ಜೀವಧ್ವನಿ ಸಂಸ್ಥೆ ನಿಖಿಲ್ ಹಂಜಗಿ.
ಹೌದು ಹಳೆ ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದ್ಭೈಲ್,ದಾಜಿಬಾನ್ಪೆಟನ ಬೀದಿ ಬದಿ ಹಾಗೂ ಮಾರುಕಟ್ಟೆಗಳಲ್ಲಿ ಉರಿ ಬಿಸಿಲಲ್ಲಿ ತರಕಾರಿ ವ್ಯಾಪಾರ ಮಾಡುವ ವೃದ್ಧರಿಗೆ ಛತ್ರಿ ವಿತರಣೆ ಮಾಡುವ ಮೂಲಕ ಜೀವ ಧ್ವನಿ ಸಂಸ್ಥೆಯು ಆಸರೆಯಾಗಿದ್ದಾರೆ.
ಈ ಉಪಕ್ರಮವು ಬಿಸಿಲಿನ ಕಠಿಣ ಹವಾಮಾನದಿಂದ ರಕ್ಷಿಸಲು ಕಾರಣವಾಗಿದೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಜೀವ ಧ್ವನಿ ಫೌಂಡೇಶನ್ ಸೇವೆಯು ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತ್ತದೆ.
ಈ ಸಂದರ್ಭದಲ್ಲಿ ಕಾರ್ಯಕರ್ತರು: ರಾಘವೇಂದ್ರ ಬಳ್ಳಾರಿ, ಅವಿನಾಶ್,ಕಿರಣ್ ಕೊಪ್ಪದ್ ಶ್ರೇಯಸ ಚೆನ್ನಿ, ಕೃಷ್ಣ ಸಾಬೋಜಿ,ಗುರು ಉಂಕಿ,ಸಚಿನ್ ಮಿಸ್ರಿಕೋಟಿ,ದಯಾನಂದ್,ಪರೋಕ್ಷ,ಅನಿಕೇತ್,ವಿನಾಯಕ್,ಶ್ರೀನಿವಾಸ,ವಿನೋದ್,ಕಾರ್ತಿಕ,ಜಾನ್ವಿ,ರೇಣುಕ,ಸಹೀನ್,ವೈಷ್ಣವಿ ಇದ್ದರು.