
ಪಬ್ಲಿಕ್ ರೈಡ್ ನ್ಯೂಸ್
ಚಾಮರಾಜನಗರ : ಹನೂರು ಪಟ್ಟಣದ ಆರ್ ಎಸ್ ದೊಡ್ಡಿ ಗ್ರಾಮದ ಗೌರಿ ಶಂಕರ ಕಲ್ಯಾಣ ಮಂಟಪದ ಹತ್ತಿರ ಇರುವ ಆವರಣದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಶಾಸಕ ಎಂ ಆರ್ ಮಂಜುನಾಥ್ ಉದ್ಘಾಟನೆ ಮಾಡಿದರು.
ಆಚರಣೆ ಕುರಿತು ಮಾತಾಡಿದ ಶಾಸಕ ರು 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣರವರು ಎಲ್ಲ ಸಮಾಜದ ಶರಣರನ್ನು ಸೇರಿಸಿ ತಮ್ಮ ಅನುಭವದ ಮಂಟಪದ ಮುಖಾಂತರ ಜಾತಿ ವ್ಯವಸ್ಥೆ ತೆಗೆದು ಹಾಕುವುದಕ್ಕೆ ಸತತವಾಗಿ ಪ್ರಯತ್ನ ಪಟ್ಟರು,
ಅದರಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಶರಣರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ ವಚನ ಸಾಹಿತ್ಯಗಳನ್ನು ಬರೆದು ಸಮ ಸಮಾಜ ಸೃಷ್ಟಿ ಮಾಡುವುದಕ್ಕೆ ದುಡಿದರು, ನಾವು ನೀವೆಲ್ಲ ಅವರ ಮಾರ್ಗದಲ್ಲಿ ನೆಡೆಯಬೇಕು,ಹಾಗೂ ವಿದ್ಯಾವಂತರಾಗ ಬೇಕು, ಇದರ ಜೊತೆ ನಮ್ಮತನದ ಕುಲ ಕಸಬುನ್ನು ಉಳಿಸಿಕೊಳ್ಳಬೇಕು , ಹಿಂದಿನ ಕಾಲದಲ್ಲಿ ಸರ್ವ ಜನರ ಊಟದ ಪದಾರ್ಥಗಳ ಸಿದ್ದ ಮಾಡುವುದಕ್ಕೆ ನಿಮ್ಮ ಬೋವಿ ಜನಾಂಗದ ಕೊಡುಗೆ ಅನನ್ಯ, ಸಾವಿರಾರು ದೇವಸ್ಥಾನ ಸ್ಥಾಪನೆಗೆ ಬೇಕಾದ ಸಾಮಗ್ರಿಗಳನ್ನು ನೀಡುವಲ್ಲಿ ನಿಮ್ಮ ಕೊಡುಗೆ ದೊಡ್ಡದಿದೆ, ಆಧುನಿಕ ಯಂತ್ರಗಳಿಂದ ನಿಮಗೆ ಕೆಲಸಕ್ಕೆ ತೊಂದರೆ ಉಂಟವಾಗಿದ್ದು ಜೀವನ ನೆಡೆಸುವುದಕ್ಕೆ ಕಷ್ಟ ಸಾಧ್ಯವಾಗಿದೆ ಅದಕ್ಕಾಗಿ ನಿಮ್ಮ ಕುಲ ಕಸುಬು ಉಳಿಸಿಕೊಳ್ಳಬೇಕು , ಬೇರೆ ಸಮುದಾಯದಗಳು ಶಿಕ್ಷಣದ ಜೊತೆಗೆ ಅವರ ಕುಲ ಕಸುಬುಗಳನ್ನು ಉಳಿಸಿಕೊಂಡು ಜೀವನೋಪಾಯ ಕಂಡು ಕಂಡಿದ್ದಾರೆ
ಅದೇ ರೀತಿ ನೀವು ಕೂಡ ಆಗಬೇಕು, ನೀವುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಸಂಘಟನೆಯಾಗಬೇಕು, ಇಂದಿನ ಕಾರ್ಯಕ್ರಮದ ಸಂದೇಶವನ್ನು ಪಡೆದುಕೊಂಡು ನಿಮ್ಮ ಸಮುದಾಯದ ಅಭಿವೃದ್ಧಿ ಕಡೆ ತೆಗೆದುಕೊಂಡು ಸಮುದಾಯದವನ್ನು ಮುಖ್ಯವಾಹಿನಿಗೆ ತರಬೇಕು.
ಎಲ್ಲ ಸಮುದಾಯದಗಳಲ್ಲೂ ಕೂಡ ಬಡವರು ಕಷ್ಟದಲ್ಲಿ ಇರುವವರು ಇದ್ದಾರೆ ಕ್ಷೇತ್ರದ್ಯಂತ ಕೆಲಸದ ನಿಮಿತ್ತ ಗುಳೆ ಹೋಗಿರುವವರನ್ನು ವಾಪಾಸ್ ಕರೆದುಕೊಂಡು ಬಂದು ತಮ್ಮ ತಮ್ಮ ಊರಿನಲ್ಲಿ ಜೀವನ ಮಾಡಬೇಕು ಆ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲು ಯೋಜನೆ ಹಾಕಿ ಕೊಂಡಿದ್ದೇನೆ ಅದಕ್ಕಾಗಿ ಕಠಿಣ ಮಾರ್ಗವನ್ನು ಹೆದುರಿಸಬೇಕು ಎಷ್ಟೇ ಸಮಸ್ಯೆ ಬಂದರು ಆ ಕೆಲಸವನ್ನು ಮಾಡೇ ಮಾಡುತ್ತೇನೆ , ಹಾಗೆ ನಿಮ್ಮ ಸಮುದಾಯದವರು ಕೊಟ್ಟಿರುವ ಕುಂದು ಕೊರೆತೆಗಳ ಬಗ್ಗೆ ಕೊಟ್ಟಿರುವ ಮನವಿಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ನಿಮ್ಮ ಜೊತೆ ಇರುತ್ತೇನೆ ಎಂದರು,
ಈ ಸಂಧರ್ಭದಲ್ಲಿ ಮಾತನಾಡಿದ ಭೋವಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಸೀತಾರಾಮ
ಮಾತನಾಡಿ ನಮ್ಮ ಬೋವಿ ಜನಾಂಗದ ಕುಲ ಕಸಬು ಮಾಡಿಕೊಂಡು ಬದಕುವುದಕ್ಕೆ ಕಾನೂನು ಬಿಡುತ್ತಿಲ್ಲ, ಕುಲ ಕಸಬು ಮಾಡಿಕೊಂಡು ಬರುತ್ತಿದ್ದ ನಾವುಗಳು ಇಂದು ಅನೇಕ ಜನರು ನಿರೋದ್ಯೋಗಿಗಳು ಆಗಿದ್ದಾರೆ ಕಾನೂನು ಬದಲಾವಣೆ ಮಾಡಿಸಿ ನಮ್ಮ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು, ಈಗಾಗಲೇ ಸಿದ್ದರಾಮಯ್ಯ ರವರಿಗೆ ಮನವಿ ಮಾಡಿ ಮನವರಿಕೆ ಮಾಡುಕೊಡಲಾಗಿದೆ. ಕೆಲವು ಬದಲಾವಣೆಗಳು ಬಂದು ನಾವೆಲ್ಲ ಕೆಲಸ ಇಲ್ಲದವರಾಗಿ ಇದ್ದೀವಿ, ಕುಲ ಕಸುಬು ನಮಗೆ ನೀಡಿ ಉಳ್ಳವರು ಸರ್ಕಾರಿ ಜಮೀನುಗಳು ಹಾಗೂ ಮಾಡುತ್ತಿದ್ದ ಜಾಗಗಳಿಗೆ ಅಧಿಕಾರಿಗಳ ಮುಖಾಂತರ ಅರ್ಜಿ ಹಾಕಿದ್ದಾರೆ. ಇದ್ದರಿಂದ ನಮ್ಮ ಜೀವನ ನೆಡೆಸುವುದು ಕಷ್ಟ ಆಗುತ್ತೆ ಕಾನೂನು ಸಲಡಿಕೆ ಆಗಬೇಕು ಭೋವಿ ಜನಾಂಗದವರು ಕಲ್ಲು ಹೊಡೆಯಲು ಅವಕಾಶ ಕೊಡಬೇಕು ಎಂದು ತಿಳಿಸಿದರು.
ಇದಕ್ಕೂ ಮೊದಲು ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಇಟ್ಟು ಹನೂರು ಪೆಟ್ರೋಲ್ ವೃತ್ತದಿಂದ ಮೆರವಣಿಗೆ ಮುಖಾಂತರ ಸಮಾವೇಶ ಸ್ಥಳಕ್ಕೆ ಬಂದು ತಲುಪಿದ್ದರು. ದಾರಿ ಉದ್ದಕ್ಕೂ ಪೂರ್ಣ ಕುಂಭ ಕಳಸದೊಂದಿಗೆ ಮಹಿಳೆಯರು ವಾದ್ಯ ಮೇಳದ ತಾಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು ವಿರಾಗಷೆ ಕುಣಿತ ವಿಶೇಷವಾಗಿತ್ತು
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಣಿ, ತಾಲ್ಲೂಕು ಮುಖಂಡ ಚಂಗಾವಡಿ ರಾಜಣ್ಣ, ಛಲವಾದಿ ಮಹಾ ಸಂಘ ತಾಲ್ಲೂಕು ಅಧ್ಯಕ್ಷ ಬಸವರಾಜ್, ಚಾಮರಾಜನಗರ ಹಾಲು ಒಕ್ಕೂಟದ ನಿರ್ದೇಶಕ ಉದ್ದುನೂರು ಮಹಾದೇವ ಪ್ರಸಾದ್, ಹಾಗೂ ಇನ್ನಿತ್ತರರು ಇದ್ದರು.
ಸುರೇಶ್ ಗುಂಡಾಪುರ
ಚಾಮರಾಜನಗರ ಜಿಲ್ಲಾ ವರದಿಗಾರರು
ಮೊಬೈಲ್ no 7022991304