April 18, 2025

ಪಬ್ಲಿಕ್ ರೈಡ್ ನ್ಯೂಸ್

ಹುಬ್ಬಳ್ಳಿ: ‘ಮಾರ್ಚ್ 3ರಿಂದ ಮಾ.11ರವರೆಗೆ ಸಿದ್ಧಾರೂಢರ ಆವರಣದಲ್ಲಿ ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ಹಮ್ಮಿಕೊಳ್ಳಲಾಗಿದೆ’ ಎಂದು ಶ್ರೀಸಿದ್ದಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿಯ ಚೇರ್ಮನ್ ಬಸವರಾಜ ಸಿ.ಕಲ್ಯಾಣಶೆಟ್ಟರ್ ತಿಳಿಸಿದರು.

ಮಾರ್ಚ್ 3 ರಂದು ಸೂರ್ಯೋದಯ ಸಮಯ ಶಿವನಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಸಂಜೆ 5ಕ್ಕೆ ಕೀರ್ತನೆ ಹಾಗೂ ಮಹಾಪೂಜೆ ನಡೆಯಲಿದೆ. ಉತ್ಸವದ ಪ್ರಯುಕ್ತ ಇಲ್ಲಿನ ಕೈಲಾಸ ಮಂಟಪದಲ್ಲಿ ಮಾರ್ಚ್ 11ರವರೆಗೆ ವಿವಿಧ ಮಠಾಧೀಶರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಿದ್ಧಾರೂಢರ ಪಲ್ಲಕ್ಕಿ ಉತ್ಸವವು ಸಂಭ್ರಮದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮಠಕ್ಕೆ ಮರಳಲಿದೆ. ಅಹೋರಾತ್ರಿ ಜಾಗರಣೆ ನಡೆಯಲಿದೆ.

‘ಸಿದ್ಧಾರೂಢರ ಜಜಯಂತ್ಯುತ್ಸವ ಹಾಗೂ ಗುಗುರುನಥರೂಢರ 115ನೇ ಜಯಂತ್ಯುತ್ಸವ ಸಿದ್ಧಾರೂಢರ ಕಥಾಮೃತದ ಶನೋತ್ಸವ ಪ್ರಯುಕ್ತ ಈ 2025ನೇ ಸಾಲಿನ ಶಿವರಾತ್ರಿಯಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ತಿಳಿಸಿದರು.

‘ಶಿವರಾತ್ರಿ ಉತ್ಸವದ ಅವಧಿಯಲ್ಲಿ ನಿತ್ಯ ರಾತ್ರಿ 8ರಿಂದ ನಾಡಿನ ಹೆಸರಾಂತ ಸಂಗೀತ ಕಲಾವಿದರಿಂದ ಸಂಗೀತೋತ್ಸವ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದರು.

‘ಶಿವರಾತ್ರಿ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ಹಿನ್ನೆಲೆಯಲ್ಲಿ ಹೆಗ್ಗೇರಿಯ ಅಂಬೇಡ್ಕರ್ ಮೈದಾನ ಹಾಗೂ ಯಾತ್ರಿ ನಿವಾಸದ ನಿಲುಗಡೆ ಬಳಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುವುದು. ವಾಹನ ನಿಲುಗಡೆ ಸ್ಥಳದಿಂದ ಮಠದ ಆವರಣಕ್ಕೆ ಭಕ್ತರನ್ನು ಕರೆತರಲು ಮತ್ತು ವಾಪಾಸ್ ವಾಹನ ನಿಲುಗಡೆ ಸ್ಥಳಕ್ಕೆ ಬಿಡಲು ಕೆಲ ಆಟೊ ಚಾಲಕರು ಹಾಗೂ ಮಾಲೀಕರು ಸೇವೆ ಸಲ್ಲಿಸುವರು ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!