
ಧಾರವಾಡ : ಹುಬ್ಬಳ್ಳಿಯ ಗೋಕುಲ್ ರೋಡನ ನಿವಾಸಿ ಜಸ್‍ವೀರ ಸಿಂಗ್ ಇವರು ವೃತ್ತಿಯಲ್ಲಿ ವ್ಯಾಪಾರಸ್ಥರಾಗಿದ್ದು ಜೆ.ಎಸ್. ಇಂಜನೀಯರಿಂಗ್ ವಕ್ರ್ಸ್‍ನ ಮಾಲೀಕರಾಗಿರುತ್ತಾರೆ. ತಮ್ಮ ವ್ಯವಹಾರಕ್ಕಾಗಿ ಎದುರುದಾರರ ಬ್ಯಾಂಕನಲ್ಲಿ 2019 ರಲ್ಲಿ ರೂ.5,20,000/- ಗಳನ್ನು ಲೋನ್ ಪಡೆದಿರುತ್ತಾರೆ. ಆ ಸಮಯದಲ್ಲಿ ಕರೋನಾ ಇದ್ದ ಕಾರಣ ಆರ್.ಬಿ.ಆಯ್. ನಿಯಮಾನುಸಾರ ಲೋನ್ ಕಂತುಗಳಿಗೆ ನಿಷೇಧವಿದ್ದರೂ ದೂರುದಾರರು ಆನ್ ಲೈನ್ ಮುಖಾಂತರ ಲೋನ್ ಕಂತುಗಳನ್ನು ಕಟ್ಟಿರುತ್ತಾರೆ.
ಎದುರುದಾರರು ದೂರುದಾರರ ಕಂತುಗಳನ್ನು ಮೂಲ ಅಸಲಿನ ಜೊತೆ ಸರಿ ಹೊಂದಿಸದೇ ದೂರುದಾರರ 8 ತಿಂಗಳ ಕಂತುಗಳ ಬಡ್ಡಿಯನ್ನು ದೂರುದಾರರ ಖಾತೆಯಿಂದ ಕಡಿತಗೊಳಿಸಿರುತ್ತಾರೆ. ಈ ವಿಷಯವನ್ನು ದೂರುದಾರ ಎದುರುದಾರರಿಗೆ ತಿಳಿಸಿದಾಗ ಅದನ್ನು ಎದುರುದಾರರು ಸರಿಪಡಿಸಿರುವುದಾಗಿ ತಿಳಿಸಿದರೂ ಅದನ್ನು ಸರಿಪಡಿಸಿರುವುದಿಲ್ಲ. ಸಾಕಷ್ಟು ಸಲ ವಿನಂತಿಸಿದರೂ ಎದುರುದಾರರು ದೂರುದಾರರ ಲೋನ್ ಮೊತ್ತವನ್ನು ಸರಿಪಡಿಸದೇ ಇರುವುದರಿಂದ ಮನನೊಂದ ದೂರುದಾರರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:09/10/2024 ರಂದು ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ಈ ಪ್ರಕರಣದ ಸಂಗತಿಗಳನ್ನು ಅವಲೋಕಿಸಿದಾಗ ದೂರುದಾರರು ಎದುರುದಾರರಲ್ಲಿ ರೂ.5,20,000/- ಗಳನ್ನು ಲೋನ್ ಪಡೆದುಅದನ್ನು 60 ಕಂತುಗಳಲ್ಲಿ ತಿಂಗಳಿಗೆ ರೂ.16,199/- ಗಳನ್ನು ಪಾವತಿಸುತ್ತಾ ಬಂದಿರುವುದು ದಾಖಲೆಗಳ ಮುಖಾಂತರ ಕಂಡು ಬಂದಿರುತ್ತದೆ. ದೂರುದಾರರು 58 ಕಂತುಗಳನ್ನು ತುಂಬಿದ ನಂತರ ಇನ್ನುಳಿದ ಎರಡು ಕಂತುಗಳ ಪೈಕಿ ಎದುರುದಾರರ ಇನ್ನೂ ರೂ.1,94,541/- ಪಾವತಿಸುವ್ಯದಾಗಿ ದೂರುದಾರರಿಗೆ ಹೇಳಿರುತ್ತಾರೆ.
ಕೋವಿಡ್-19 ಸಮಯದಲ್ಲೂ ದೂರುದಾರರು ಕಂತುಗಳನ್ನು ಪಾವತಿಸಿದ್ದರೂ ಎದುರುದಾರರು ಅದನ್ನು ಲೋನ್ ಅಸಲು ಮೊತ್ತದಲ್ಲಿ ಸರಿಪಡಿಸದೇ ದೂರುದಾರರಿಗೆ ಹೆಚ್ಚಿನ ಹಣವನ್ನು ಭರಿಸಲು ಹೇಳಿರುವುದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗಿದೆ ಅಚಿತಾ ಅಭಿಪ್ರಾಯಪಟ್ಟು ದೂರುದಾರರ ಲೋನ್ ಮತ್ತು ಅದರ ಮೇಲೆ ಬಡ್ಡಿಯನ್ನು ಸರಿಪಡಿಸುವಂತೆ ಎದುರುದಾರರಿಗೆ ಆದೇಶಿಸಿ ಇದರಿಂದ ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ ರೂ.25,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚು ಆದೇಶವಾದ ಒಂದು ತಿಂಗಳೊಳಗಾಗಿ ಭರಿಸಲು ಎದುರುದಾರರಾದ ಕಿಣಾರಾ ಪ್ರೈ.ಲಿ., ಗೆ ಆಯೋಗ ಆದೇಶಿಸಿ ತೀರ್ಪು ನೀಡಿದೆ.