April 18, 2025

ಧಾರವಾಡ

ಜನನಿಬಿಡ ಪ್ರದೇಶದಲ್ಲಿ ಕಾನೂನು ಉಲ್ಲಂಘಿಸಿ ಸಾರ್ವಜನಿಕರಿಗೆ ಕಿರಿಕಿರಿ ಮಾಡುತ್ತಿದ್ದವರು ಸೇರಿದಂತೆ ಕೈಯಲ್ಲಿ ಖಡ್ಗ ಹಾಕಿಹೊಂಡು ಪುಡಾರಿತನ ಮೇರೆಯುತ್ತಿದ್ದವರು ಹಾಗೂ ಕಾನೂನು ಉಲ್ಲಂಘಿಸಿ ಬೈಕ ಓಡಾಡಿಸುತ್ತಿದ್ದವರಿಗೆ ಇಂದು ಉಪನಗರ ಠಾಣೆಯ ಪೊಲೀಸರು ಏರಿಯಾ ಡಾಮಿನೇಷನ್ ಮೂಲಕ ಖಡಕ್ಕಾಗಿಯೇ ಬಿಸಿ ಮುಟ್ಡಿಸುವ ಕೆಲಸ ಮಾಡಿದ್ದಾರೆ.

ವೀಕೆಂಡ್ ಎಂದು ಮಜಾ ಮೂಡನಲ್ಲಿದ್ದ ಧಾರವಾಡ ಉಪನಗರ ಪೊಲೀಸ ಠಾಣೆ ವ್ಯಾಪ್ತಿಯ ಪುಂಡ ಪೋಕರಿಗಳಿಗೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿ ಓಡಾಟ ಮಾಡುತ್ತಿದ್ದವರನ್ನು ಏರಿಯಾ ಡಾಮಿನೇಷನ್ ಮೂಲಕ ವಶಕ್ಕೆ ದಂಡಾಸ್ತ್ರ ಪ್ರಯೋಗಿ ಕಾನೂನು ಬಿಸಿ ಮುಟ್ಟಿಸಿದ್ದಾರೆ. ಉಪನಗರ ಪೊಲೀಸರ ಏರಿಯಾ ಡಾಮಿನೇಷನ್ ಟೀಂ ನಗರದ ಠಾಣೆ ವ್ಯಾಪ್ತಿಯಲ್ಲಿ ಸಂಚರಿಸಿ, ಕಾನೂನು ಉಲ್ಲಂಘಿಸಿವವರನ್ನು, ಸಂಚಾರ ನಿಯಮ ಉಲ್ಲಂಘಿಸುವರರನ್ನು ಹಾಗೂ ಪ್ರಮುಖ ರಸ್ತೆಗಳಲ್ಲಿ ಕುಳಿತು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದವರನ್ನು ವಶಕ್ಕೆ ಪಡೆದ ಠಾಣೆಗೆ ಕರೆದುಕೊಂಡು ಬಂದು ದಂಡ ಹಾಕಲಾಯಿತು.

ಒಟ್ಟು 40 ಬೈಕ್ ಸೇರಿ 105 ಜನರನ್ನು ವಶಕ್ಕೆ ಪಡೆದು ಧಾರವಾಡ ಎಸಿಪಿ ಪ್ರಸಾಂತ್ ಸಿದ್ಧನಗೌಡರ ನೇತೃತ್ವದಲ್ಲಿ ದಂಡ ಹಾಕಲಾಗಿದೆ.

ಇನ್ನೂ ಇದರಲ್ಲಿ ಕೆಲವರು ಮುಂಗೈಗೆ ಖಡ್ಗ ಹಾಕಿಕೊಂಡು ಪುಡಾರಿತನ ಮೇರೆಯುತ್ತಿದ್ದವರ ಖಡ್ಗವನ್ನು ವಶಕ್ಕೆ ಪಡೆದು ಖಡಕ್ ಎಚ್ಚರಿಕೆ ನೀಡಲಾಯಿತು. ಇನ್ನೂ ಪೊಲೀಸರ ಏರಿಯಾ ಡಾಮಿನೇಷನ್ ಕಾರ್ಯವು ಸಾರ್ವಜನಿಕರ ಮೆಚ್ಚುಹೆಗೆ ಪಾತ್ರವಾಗಿದೆ. ಇನ್ನೂ ಈ ಸಂದರ್ಭದಲ್ಲಿ ಉಪನಗರ ಠಾಣೆಯ ಸಿಪಿಐ ದಯಾನಂದ್ ಶೇಗುಣಸಿ, ಪಿಎಸ್‌ಐ ಕೊಡಬಾಳ, ಪಿಎಸ್‌ಐ ಬಳ್ಳಾರಿ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!