April 16, 2025

ಹುಬ್ಬಳ್ಳಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರೋರ್ವರ ಕೈವಾಡವಿರುವುದು ಸಂಶಯ ಮೂಡಿ ಬಂದಿದ್ದು ತನಿಖೆಯಾಗಬೇಕು ಹಾಗೂ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕೆಂದು‌ ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಹಾ ಹಿರೇಮಠ್ ಕೊಲೆಯಾಗಿ 9 ತಿಂಗಳಾದರೂ ಯಾವುದೇ ಪ್ರಕ್ರಿಯೆ ನಡೆಯದೇ ಇರುವುದು ಸರ್ಕಾರದ ವೈಫಲ್ಯವಾಗಿದೆ. ಸಿಎಂ ಅವರು ನೇಹಾ ಮನೆಗೆ ಭೇಟಿ ನೀಡಿದ ಬಳಿಕ ನಾಲ್ಕು ತಿಂಗಳಲ್ಲಿ ಕೊಲೆಗಡುಕನಿಗೆ ಶಿಕ್ಷೆ ಕೊಡಲಾಗುವುದು ಶೀಘ್ರ ನ್ಯಾಯಾಲಯ ರಚನೆ ಮಾಡಲಾಗುವುದೆಂದು ಹೇಳಿದ್ದರು. ಆದರೆ ಯಾವುದೇ ಪ್ರಗತಿಯಿಲ್ಲ. ಅಷ್ಟೇ ಅಲ್ಲದೇ ರಾಜ್ಯದಲ್ಲಿ ನೇಹಾ ಪ್ರಕರಣದ ನಂತರ ಲವ್ ಜಿಹಾದ್ ಪ್ರಕರಣಗಳು ಆಗಿದ್ದು ಕೊಲೆ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣ ಇವುಗಳೆಲ್ಲವುಗಳಿಗೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಿದೆ ಎಂದು ಆರೋಪಿಸಿದರು.

ಕೂಡಲೇ ನೇಹಾ ಪ್ರಕರಣ ಶೀಘ್ರ ನ್ಯಾಯಾಲಯ ರಚಿಸಿ ಇಲ್ಲವೇ ಸಿಬಿಐಗೆ ಒಪ್ಪಿಸಬೇಕು, ಕೊಲೆ ಹಿಂದೆ ಪ್ರಭಾವಿಗಳು ಹಾಗೂ ಒಬ್ಬ ಶಾಸಕ ಇರುವ ಸಾಧ್ಯತೆಗಳಿವೆ. ಆದ್ದರಿಂದ ಸಮಗ್ರ ತನಿಖೆಯಾಗಬೇಕು, ಕೊಲೆಗಡುಕನನ್ನು ಕಾಲೇಜಿನಿಂದ ಇನ್ನೂ ಅಮಾನತು ಮಾಡಿಲ್ಲ, ಯಾವುದೇ ಕಾರಣಕ್ಕೆ ನೇಹಾ ಪ್ರಕರಣವನ್ನು ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬಾರದು,  ಇಲ್ಲವಾದಲ್ಲಿ ಹುಬ್ಬಳ್ಳಿಯ ಬಿವಿಬಿ ಕಾಲೇಜಿನಿಂದ ನ್ಯಾಯಾಲಯದವರೆಗೆ ಮೌನ ಮೆರವಣಿಗೆ ಮಾಡುತ್ತೇವೆ ಹಾಗೂ ಕೊಲೆಗಡುಕನ ಪರವಾಗಿ ವಕಾಲತ್ತು ಹಾಕಿದ ಇಬ್ಬರು ವಕೀಲರ ಮನೆ ಮುಂದೆ ಧರಣಿ ಮಾಡುತ್ತೇವೆಂದು ಅವರು ಎಚ್ಚರಿಕೆ ನೀಡಿದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಅಣ್ಣಪ್ಪ ದಿವಟಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಂಜು ಕಾಟಕರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!