April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಕ್ಷೇತ್ರದ ರಾಜಗೋಪಾಲನಗರ ವಾರ್ಡ್‌ನ

ಬಸಪ್ಪನ ಕಟ್ಟೆಯ ಗ್ರಾಮ ದೇವತೆ ಶ್ರೀ ದುಗ್ಗಲಮ್ಮ ದೇವಿ ದೇವಸ್ಥಾನದ ಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಉದ್ಘಾಟನಾ ಕಾರ್ಯಕ್ರಮಕ್ಕೆ ಕುಂಚಿಟಿಗ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ. ಶಾಂತವೀರಮಹಾಸ್ವಾಮಿಗಳು , ಅರೆಶಂಕರಮಠದ ಪರಮ ಪೂಜ್ಯ ಶ್ರೀ ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿಗಳು, ಎಲೆರಾಮಪುರದ ನರಸಿಂಹಗಿರಿ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ.ಹನುಮಂತನಾಥ ಮಹಾಸ್ವಾಮಿಗಳು, ವನಸಿರಿ ಶರಣಾಶ್ರಮ ಸಂಸ್ಥಾನ ಮಠದ ಶ್ರೀ ಶ್ರೀ ಡಾ.ಶಂಕರ್ ಆರಾಧನಾ ಗುರೂಜಿ ಆಗಮಿಸಿ ಶ್ರೀ ದುಗ್ಗಲಮ್ಮ ದೇವಸ್ಥಾನದ ಉದ್ಘಾಟನೆಯನ್ನು ನೆರವೇರಿಸಿದರು.

ಇದೇ ವೇಳೆ ಶ್ರೀ ಕೃಷ್ಣ ಚಂದ್ರ ಕನ್ವೆಷನ್ ಹಾಲ್ ಮಾಲಿಕ ಹಾಗೂ ಕೆಪಿಸಿಸಿ ಮಾಜಿ ಸದಸ್ಯ ಪಿ ಎನ್. ಕೃಷ್ಣಮೂರ್ತಿ, ಮಾಜಿ ಪಾಲಿಕೆ ಸದಸ್ಯ ಲಗ್ಗೆರೆ ನಾರಾಯಣಸ್ವಾಮಿ, ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಗದೀಶ್ ಕುಮಾರ್, ಸುಂಕದಕಟ್ಟೆ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ನಾರಾಯಣಸ್ವಾಮಿ ಹಾಗೂ ಶ್ರೀ ದುಗ್ಗಲಮ್ಮ ಟ್ರಸ್ಟ್ ಸಮಿತಿ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!