
ಹುಬ್ಬಳ್ಳಿ
ಭಾನುವಾರ ತಡ ರಾತ್ರಿ ಹುಬ್ಬಳ್ಳಿಯಲ್ಲಿ ನಡೆದಿದ್ದ ಸಿಲಿಂಡರ್ ಸೋರಿಕೆಯ ಬೆಂಕಿಯಿಂದ ಗಾಯಗೊಂಡ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಆರೋಗ್ಯವನ್ನು ಗೃಹ ಸಚಿವರ ಜಿ.ಪರಮೇಶ್ವರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಿಲಿಂಡರ್ ಸೋರಿಕೆಯಿಂದ ಗಾಯಗೊಂಡ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆರೋಗ್ಯ ವಿಚಾರಿಸಿದ ನಂತರ ಮಾತನಾಡಿದ ಅವರು ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಘಟನೆಯಲ್ಲಿ 9 ಜನ ಮಾಲಾಧಾರಿಗಳು ಗಾಯಗೊಂಡಿದ್ದಾರೆ.
ಅದರಲ್ಲಿ ಇಬ್ಬರನ್ನು ಬಿಟ್ಟರೆ ಬಹುತೇಕರಿಗೆ 80% , 90% ಗಾಯಗಳು ಆಗಿವೆ. ವೈದ್ಯರು ಎಲ್ಲ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನ ಉಳಿಸುವುದಕ್ಕೆ ಜಿಲ್ಲಾ ಸಚಿವರು , ಶಾಸಕರು ವೈದ್ಯರಿಗೆ ಹೇಳಿದ್ದೇವೆ ಚಿಕಿತ್ಸೆಯಲ್ಲಿ ನಿರ್ಲಕ್ಷ ಆಗಬಾರದು ಹೇಳಲಾಗಿದೆ ಎಂದರು. ಕ್ರಿಟಿಕಲ್ ಇರುವರನ್ನ ಉಳಿಸಲು ಸೂಚನೆ ಕೊಟ್ಟಿದ್ದೇವೆ. ನಾಳೆಯಿಂದ ಯಾರನ್ನು ಗಾಯಗೊಂಡವರನ್ನ ನೋಡಲು ಬಿಡಬೇಡಿ ಎಂದು ಸೂಚನೆ ನೀಡಿದ್ದೇವೆ. ಗಾಯಗೊಂಡವರನ್ನ ನೋಡಲು ಹೋದರೆ ಇನ್ಫೆಕ್ಷನ್ ಆಗುತ್ತೆ. ಆದ್ದರಿಂದ ಮೊದಲು ಗಾಯಗೊಂಡವರಿಗೆ ಚಿಕೆತ್ಸೆ ನೀಡಲಾಗುತ್ತೆ. ಈ ಪ್ರಕರಣ ಪ್ರಮುಖ ಪ್ರಕರಣವಾಗಿ ಮುಖ್ಯ ಮಂತ್ರಿಗಳ ನಿಧಿಯಲ್ಲಿ ಪರಿಹಾರ ನೀಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಕಿಮ್ಸ್ ಆಸ್ಪತ್ರೆಯಲ್ಲಿ ಔಷಧ ನೀಡುವುದರಲ್ಲಿ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ. ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದರು.