ಪಬ್ಲಿಕ್ ರೈಡ್ ಹುಬ್ಬಳ್ಳಿ
ಕಳೆದ ದಿನ ಗಲಾಟೆ ನಡೆದ ವೇಳೆ ಸದನ ಮುಂದುಡಿದ ಸಮಯದಲ್ಲಿ ಬಿಜೆಪಿ ಕಾಂಗ್ರೆಸನವರ ನಡುವೆ ಗಲಾಟೆ ಆಗಿದೆ, ಆದರೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆರೋಪಿಸುತ್ತಿರುವ ಬಗ್ಗೆ ಸಿಟಿ ರವಿ ಅವರು ಮಾತಾಡಿರೋದು ಎಲ್ಲೂ ರೆಕಾರ್ಡ್ ಆಗಿಲ್ಲ ಎಂದು ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿಯವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪರಿಷತ್ ಸಭಾಪತಿಗಳು ಮಾತನಾಡಿ, ಕಳೆದ ದಿನ ಸದನದಲ್ಲಿ ಪ್ರಶ್ನೋತ್ತರ ವೇಳೆ ಮುಗಿದ ಬಳಿಕ. ಕಾಂಗ್ರೆಸ್ ನವರು ಅಮಿತ್ ಶಾ ವಿರುದ್ದ ಪ್ರತಿಭಟನೆಗೆ ಮುಂದಾದರು. ಈ ವೇಳೆ ಗಲಾಟೆ ಆಯ್ತು,ಗಲಾಟೆ ಹಿನ್ನಲೆ ನಾವು ಕಲಾಪ ಮುಂದುಡಿದ್ವಿ. ಅವಾಗ ಇದೆಲ್ಲ ಗಲಾಟೆ ಆಗಿದೆ. ಆರು ಗಂಟೆಗೆ ಸಿಟಿ ರವಿ ಅರೆಸ್ಟ್ ಆಗಿರೋ ಮಾಹಿತಿ ಬಂದಿದೆ. ಇನ್ನೂ ಸಿಟಿ ರವಿ ಅವರು ಸಚಿವರಾದ ಲಕ್ಷ್ಮ ಹೆಬ್ಬಾಳ್ಕರ್ ಕುರಿತು ಮಾತಾಡಿರುವುದು ಕೆಲ ಮಾಧ್ಯಮಗಳಲ್ಲಿ ಬಂದಿದೆ. ಆದ್ರೆ ನಮ್ಮಲ್ಲಿ ರೆಕಾರ್ಡ್ ಆಗಿಲ್ಲ. ನಾನು ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಸಿಟಿ ರವಿ ಅವರನ್ನು ಕರೆದು ಮಾತಾಡಿದೆ. ಇದನ್ನು ಇಲ್ಲಿಗೆ ಮುಗಿಸೋಣ ಅಂದ್ರೆ. ಸಚಿವರು ಅದನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ರವಿ ಅವರು ನಾನು ಪ್ರಸ್ಟ್ರೇಟ್ ಆಗಿದ್ದಾರೆ ಎಂದಿದ್ದೇನೆ,ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದು ರವಿ ಹೇಳಿದ್ರು. ಈ ರೀತಿ ಆಗಿರೋದು ಮೊದಲ ಸಲ. ಸದನದಲ್ಲಿ ಪೊಲೀಸರು ಬರಲು ಅನುಮತಿ ಇಲ್ಲ. ಸ್ಥಳ ಮಹಜರು ಮಾಡಲು ಅನುಮತಿ ನೀಡಿಲ್ಲ. ಸದನ ನಡೆದಾಗ ಘಟನೆ ಆಗಿಲ್ಲ. ಪೊಲೀಸರಿಗೆ ನಮ್ಮ ಅನುಮತಿ ಇಲ್ಲದೆ ಒಳಗೆ ಬರಲು ಅನುಮತಿ ಇಲ್ಲ. ಪೊಲೀಸ್ ಅಧಿಕಾರಿಗಳು ಸದನದಲ್ಲಿ ಬರಲು ಅಧಿಕಾರ ವಿಲ್ಲ ಎಂದು ಹೇಳಿದ್ದಾರೆ.