ಪಬ್ಲಿಕ್ ರೈಡ್ ನ್ಯೂಸ್ ಹುಬ್ಬಳ್ಳಿ
ಇಷ್ಟು ದಿನ ಆಹಾರ ಇಲಾಖೆಯ ರೇಷನ ಕಾರ್ಡಗೆ ತಟ್ಟಿದ್ದ ಸರ್ವರ್ ಸಮಸ್ಯೆ ಈಗ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಜನನ ಮರಣ ಪತ್ರದ ವಿಭಾಗಕ್ಕೂ ತಟ್ಟಿದೆ. ಪಾಲಿಕೆಯ ಮುಖ್ಯ ಕಟ್ಟಡ ಜನನ ಮರಣ ದಾಖಲಾತಿ ಪಡೆಯಲು ವಾಣಿಜ್ಯ ನಗರಿಯ ಜನತೆ ಹೈರಾಣಾಗಿದ್ದಾರೆ.
ಹುಬ್ಬಳ್ಳಿ ಮಾಹಾನಗರ ಪಾಲಿಕೆಯ ಮುಖ್ಯ ಕಟ್ಟಡದ ಜನನ ಮರಣ ದಾಖಲಾತಿ ವಿಭಾಗದಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ನೂರಾರು ಸಂಖ್ಯೆಯಲ್ಲಿ ಜನರು ಸರದಿ ಸಾಲಿನಲ್ಲಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಒಂದು ದಿನ ಪಾಳೆ ಹಚ್ಚಲು ನಿಲ್ಲುವ ಸ್ಥಿತಿ ಜನಗಳಿಗೆ ಬಂದೊದಗಿದ್ದು, ಜನತೆ ಪಾಲಿಕೆಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ತಮ್ಮ ಮಕ್ಕಳ ಹುಟ್ಟಿನ ದಾಖಲಾತಿ ಸೇರಿ ತಮ್ಮ ಸಂಬಂಧಿಗಳ ಮರಣ ದಾಖಲೆ ಪಡೆಯಲು ವಾಣಿಹ್ಯ ನಗರಿ ಜನತೆ ಪರದಾಡುವಂತಾಗಿದೆ. ಜನನ ಪ್ರಮಾಣ ಪತ್ರಗಳ ನವೀಕರಣ ಹಾಗೂ ತಿದ್ದುಪಡಿ ಸಂಬಂಧಿಸಿದಂತೆ ದಿನವಿಡೀ ಜನರಿಗೆ ಇದೆ ಗೋಳು ಕಾಡುತ್ತಿದೆ. ಮುಂಜಾನೆ 10 ಗಂಟೆಯಿಂದ ಮಧ್ಯಾಹ್ನ 1:30 ಕ್ಕೆ ಜನನ ಮರಣ ವಿಭಾಗಕ್ಕೆ ನಿಗದಿ ಇಲಾಖೆ ನಿಗದಿ ಮಾಡಿದೆ. ಆದರೆ ಈ ಸಮಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದಲ್ಲಿ ನಾಳೆ ಬಾ ಅನ್ನೋದು ಸಿಬ್ಬಂದಿಯ ಸಮಜಾಯಿಸಿ ಜನಗಳಿಗೆ ಸಮಾನ್ಯವಾಗಿದೆ.
ಸಿಬ್ಬಂದಿಗಳ ವರ್ತನೆಯಿಂದಲ್ಲೂ ಜನಸಾಮನ್ಯರು ಹೈರಾಣಾಗಿದ್ದಾರೆ. ನಾಳೆ ಬಾ, ಬೆಳಿಗ್ಗೆ ಬಾ ಅಂತ ಒಂದು ಬೋರ್ಡ್ ಹಾಕೊಂಡ ಬಿಡರಿ ಎಂದು ಜನರೇ ತಮ್ಮ ಆಕ್ರೋಶ ಹೊರಹಾಕುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಪಾಲಿಕೆಯ ಮುಖ್ಯ ಕಟ್ಟಡದ ಆವರಣದಲ್ಲಿರೋ ಜನನ ಮರಣ ವಿಭಾಗದಲ್ಲಿ ಸರ್ವರ್ ಸಮಸ್ಯೆಯಿಂದ ಜನರು ಹೈರಾಣಾಗುತ್ತಿದ್ದರು ಪಾಲಿಕೆ ಆಯುಕ್ತರಿಗೆ ಇದರ ಬಗ್ಗೆ ಗೊತ್ತೆ ಇಲ್ವಾ ಅನ್ನೋ ಪ್ರಶ್ನೆ ಮೂಡಿಸುತ್ತಿದೆ. ಪಾಲಿಕೆ ಆಯುಕ್ತರು ಈ ಕಡೆ ಗಮನ ಹರಿಸಿ ಜನಗಳಿಗೆ ಸರ್ವರ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆ ನಿವಾರಿಸುವ ಕಡೆ ಗಮನ ಹರಿಸುತ್ತಾರೋ ಇಲ್ವೋ ಕಾದು ನೋಡಬೇಕಾಗಿದೆ.
ವರದಿ ಕಿರಣ ಬಳ್ಳಾರಿ (ಹುಬ್ಬಳ್ಳಿ-ಧಾರವಾಡ)