ಪಬ್ಲಿಕ್ ರೈಡ್ ಧಾರವಾಡ
ಅಶೋಕ್ ಲೈಲ್ಯಾಂಡ್ ಮಿನಿ ಗೂಡ್ಸ ಮತ್ತು ಕಾರು ಹಾಗು ಬೈಕ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿ, ಮತ್ತಿಬ್ಬರಿಗೆ ಗಾಯವಾದ ಘಟನೆ ಧಾರವಾಡ ತೇಜಸ್ವಿ ನಗರದಲ್ಲಿ ಕಳೆದ ದಿನ ರಾತ್ರಿ ನಡೆದಿದೆ.
ತೇಜಸ್ವಿ ನಗರದ ಸಾಗರ ಹೊಟೇಲ್ ಬಳಿ ಈ ದುರ್ಘಟನೆ ನಡೆದಿದ್ದು, ಸಂಗೊಳ್ಳಿ ರಾಯಣ್ಣ ನಗರದ ಪ್ರಶಾಂತ ಎಂಬಾತ ಸಾವಿಗೀಡಾಗಿದ ಬೈಕ್ ಚಾಲಕನೆಂದು ಗುರುತಿಸಲಾಗಿದೆ. ಅಶೋಕ್ ಲೇಲ್ಯಾಂಡ್ ಸೇರಿ ಕಾರಿನ ಮುಂಭಾಗ ಜಖಂ ಗೊಂಡಿದೆ.
ಮತ್ತಿಬ್ಬರು ಗಾಯಾಳುಗಳ ವಿವರ ಸಿಗಬೇಕಾಗಿದ್ದು, ಅಪಘಾತ ನಡೆಯುತ್ತಿದಂತೆ ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡುವುದರ ಜತೆಗೆ ಪೊಲೀಸರಿಗೆ ಮಾಹೀತಿ ನೀಡಿದ್ದಾರೆ. ಸ್ಥಳೀಇಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆಯ ಪೊಲೀಸರು ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.