
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ
ಕಳೆದ ಅಕ್ಟೋಬರ್ 24 ರಂದು ಧಾರವಾಡ ಚರಂತಿಮಠ ನಿವಾಸಿ ಮಂಜುನಾಥ ಕೆಟೆಗೆಣ್ಣವರ ಸಾಲದ ಬಡ್ಡಿ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಧಾರವಾಡ ಉಪನಗರ ಠಾಣೆಯಲ್ಲಿ ಓರ್ಬ ಬಡ್ಡಿದಂಧೆ ಕೋರನ ವಿರುದ್ಧ ದೂರು ದಾಖಲಾಗಿದೆ.
ಹೌದು ಕಳೆದ ಅಕ್ಟೋಬರ್ 24 ಗುರುವಾರದಂದು ಮಂಜುನಾಥ ಕೆಟೆಗೆಣ್ಣವರ ಸಾಲದ ಬಡ್ಡಿ ಕಿರುಕುಳದಿಂದ ಕೆಲಗೇರಿ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದನ್ನು. ಮಗನ ಸಾವಿನಿಂದ ನೊಂದ ಕುಟುಂಬ ಯುವಕ ತಾಯಿ ರುಕ್ಮವ್ವ ಉಪನಗರ ಪೊಲೀಸ ಠಾಣೆಯಲ್ಲಿ ಚೇತನ ಮೇಟಿ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇನ್ನೂ ಚೇತನ ಬಳಿ ಆತ್ಮಹತ್ಯೆ್ಎ ಶರಣಾದ ಮಂಜುನಾಥ ಸುಮಾರು 7 ಲಕ್ಷ ರೂಪಾಯಿ ಬಡ್ಡಿಸಾಲ ಮಾಡಿದ್ದನಂತೆ.
ಇತ್ತೀಚೆಗೆ ಮಂಜುನಾಥ ಬಡ್ಡಿ ನೀಡಿದಲ್ವಂತೆ, ಹೀಗಾಗಿ ಬಡ್ಡಿಗೆ ದುಡ್ಡ ನೀಡಿದ ಚೇತನ ಹಾಗೂ ಇನ್ನಿತರರ ಕಿರುಕುಳದಿಂದ ನಮ್ಮ ಮಗ ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮೃತ ಮುಂಜುನಾಥ ಕುಟುಂಬ ಉಪನಗರ ಪೊಲೀಸ ಠಾಣೆಗೆ ದೂರು ನೀಡಿದೆ. ಸದ್ಯ ದೂರು ಪಡೆದುಕೊಂಡಿರುವ ಪೊಲೀಸರು ಈಗ ಆರೋಪಿ ಚೇತನ ಬಂಧನಕ್ಕೆ ಬಲೆ ಬೀಸಿದ್ದಾರೆ.