
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ಬಾಗಲಗುಂಟೆ ಮಾರಮ್ಮದೇವಿ ಜಾತ್ರಾ ಮಹೋತ್ಸವ 27ರಿಂದ 29ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಭಾನುವಾರ (ಅ. 27) ಬೆಳಗ್ಗೆ 10ಕ್ಕೆ ದೇವರ ಬಾವಿಯಲ್ಲಿ ಗಂಗಾಪೂಜೆ, ಮಧ್ಯಾಹ್ನ 2ಕ್ಕೆ ದೇವಿಗೆ ಪುಣ್ಯಾಹ, ರಾತ್ರಿ 7ಕ್ಕೆ ಕುರ್ಜಿ ಮರ ಎತ್ತುವುದು, 8 ಗಂಟೆಗೆ ಬಾಗಲಗುಂಟೆಯ ಪ್ರಮುಖ ರಸ್ತೆಗಳಲ್ಲಿ ಮಾರಮ್ಮ ದೇವೆಯ ಮೆರವಣಿಗೆ ಮಾಡಿ ರಾತ್ರಿ 11 ಗಂಟೆಗೆ ಅಗ್ನಿಕುಂಡ ಹಚ್ಚುವುದು, 11.30ಕ್ಕೆ ದೇವಿಯ ಘಟ್ಟಘಡಿಗೆ ಸಿಡೇದಹಳ್ಳಿ ಮತ್ತು ತೋಟದ ಗುಡ್ಡದಹಳ್ಳಿಗೆ ಹೊರಡಲಿದೆ.
28ರ ಬೆಳಗ್ಗೆ 8ಕ್ಕೆ ಶ್ರೀ ವಿನಾಯಕ ಹಾಗೂ ನವಗ್ರಹಗಳಿಗೆ ಬೆಲ್ಲದ ಆರತಿ, 9 ಗಂಟೆಗೆ ಶ್ರೀ ವೇಣುಗೋಪಾಲ ಸ್ವಾಮಿ,10 ಗಂಟೆಗೆ ಆಂಜನೇಯ ಸ್ವಾಮಿಗೆ, 11 ಗಂಟೆಗೆ ರಾಮದೇವರಿಗೆ ಬೆಲ್ಲದಾರತಿ ನಡೆಯಲಿದೆ. ಮಧ್ಯಾಹ್ನ 1.30ಕ್ಕೆ ಮಾರಮ್ಮ ದೇವಿಗೆ ದೊಡ್ಡ ಆರತಿ ಹಾಗೂ ಬಾಯಿಬೀಗ ಸೇವೆಗಳು ನಡೆಯಲಿದೆ.
2 ಗಂಟೆಗೆ ಅಲಗು ಸೇವೆ, 3 ಗಂಟೆಗೆ ಭಕ್ತರು ಅಗ್ನಿಕುಂಡದಲ್ಲಿ ಸ್ವಾಮಿಗೆ ಬೆಲ್ಲದಾರತಿ ಜರುಗಲಿದೆ. 8ಕ್ಕೆ ‘ಕುರುಕ್ಷೇತ್ರ’ ಪೌರಾಣಿಕ ನಾಟಕ ಪ್ರದರ್ಶನವಿರಲಿದೆ. 29ರಂದು ಸಂಗೀತ ರಸಸಂಜೆ ಹಾಗೂ ಬಾಗಲಗುಂಟೆಯ ಎಲ್ಲ ದೇವರುಗಳಿಗೂ ಮಹಾಮಂಗಳಾರತಿ ನಡೆಯಲಿದೆ ಎಂದು ಮಾರಮ್ಮ ದೇವಿ ಸಮಿತಿ ತಿಳಿಸಿದೆ.