
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ
ಸಾಲಭಾಧೆ ತಾಳಲಾರದೇ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಧಾರವಾಡ ಕೆಲಗೇರಿ ಕೆರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೆಲಗೇರಿ ನಿವಾಸಿ ಮೂತ್ತೆರಡು ವರ್ಷದ ಮಂಜುನಾಥ್ ಕಟಗೆಣ್ಣವರ ಕೆರೆಗೆ ಹಾರಿ ಮತ್ಮಹತ್ಯೆಗೆ ಶರಣಾಗಿರೋ ಯುವಕನಾಗಿದ್ದಾನೆ.
ಗುರುವಾರ ಮುಂಜಾನೆ ಯುವಕ ಕೆರೆಗೆ ಹಾರಿರುವ ಶಂಕೆ ಇದ್ದು, ಮಧ್ಯಾಹ್ನದ ನಂತರ ಮೃತದೇಹ ನೋಡಿದ ಸ್ಥಳೀಯರು, ಉಪನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮೃತ ದೇಹ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಸದ್ಯ ಪಚರಕರಣ ದಾಖಲಿಸಿಕೊಂಡಿರುವ ಉಪನಗರ ಠಾಣೆಯ ಪೊಲೀಸರು ಈಗ ಯುವಕನ ಸಾವಿನ ತನಿಖೆಗೆ ಮುಂದಾಗಿದ್ದಾರೆ.