
ಪಬ್ಲಿಕ್ ರೈಡ್ ನ್ಯೂಸ್ ರಾಮದುರ್ಗ
ಸ್ಪರ್ಧೆ ಅನ್ನೋದು ಯಾವಾಗ, ಎಲ್ಲಿ ಹೇಗೆ ಹುಟ್ಟುತ್ತದೆ ಅನ್ನುವುದನ್ನು ಹೇಳುವುದು ತುಂಬಾ ಕಷ್ಟು. ಅದಕ್ಕೆ ತಾಜಾ ಉದಾಹರಣೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ಗ್ರಾಮದಲ್ಲಿ ಟೀ ಕುಡಿಯೋ ಸಮಯದಲ್ಲಿ ಮಾತ ಮಾತಲ್ಲಿ ಹುಟ್ಟಿಕೊಂಡ ಈ ಸ್ಪರ್ಧೆ, ಹೌದು ಗೊಡಚಿ ಗ್ರಾಮದ ಹಿರಿಯ ರೈತ ವಿರೂಪಾಕ್ಷಗೌಡ ಪಾಟೀಲ ತನ್ನ 58 ನೇ ವಯಸ್ಸಿನಲ್ಲಿ ಯುವ ಸಮಯದಾಯ ನಾಚ್ಚುವಂತೆ ಗೊಬ್ಬರ ತುಂಬಿದ 50 ಕೆಜಿ ಚೀಲವನ್ನು 7 ಕಿಲೋಮೀಟರ್ ಮೀಟರು ಹೊತ್ತು ನಡೆಯುವ ಮೂಲಕ ತನ್ನ ಪೌರುಷ ತೋರಿಸಿದ್ದಾರೆ. ಚಂದರಗಿ ಗ್ರಾಮದಿಂದ ಗೊಡಚಿ ಗ್ರಾಮದವರೆಗೂ 7 ಕಿಲೊಮೀಟರ್ ನಡೆದುಕೊಂಡು ಬಂದಿದ್ದಾರೆ.
ಒಂದು ಚೀಲ ಎತ್ತಲು ಇಂದಿನ ಯುವ ಸಮುದಾಯ ಪಕ್ಕದವರ ಸಹಾಯ ಪಡೆದುಕೊಳ್ಳುವ ಈ ಕಾಲದಲ್ಲಿ, ಟೀ ಕುಡಿಯೋ ಪ್ರೀ ಟೈಂನಲ್ಲಿ ಹುಟ್ಟಿಕೊಂಡ ಸ್ಪರ್ಧೆಯ ಮಾತಿನಿಂದ ವಿರೂಪಾಕ್ಷಗೌಡ ಅವರು ಯಾರೊಬ್ಬರ ಸಹಾಯವಿಲ್ಲದೆ ಎಳು ಕಿಲೋಮೀಟರ್ ಚೀಲ ಹೊತ್ತು ಸ್ಪರ್ಧೆ ಪೂರ್ಣ ಮಾಡಿರುವುದು ಗ್ರಾಮದ ರೈತ ಸಮುದಾಯದಲ್ಲಿ ಸಂತಸ ಮೂಡಿಸಿದೆ. ಜತೆಗೆ ರೈತನ ಈ ಸಾಧನೆಗೆ ಗ್ರಾಮಸ್ಥರೆಲ್ಲರು ವಿರೂಪಾಕ್ಷ ಗೌಡರಿಗೆ ಸನ್ಮಾನಿಸಿ, ಗ್ರಾಮದಲ್ಲಿ ಟ್ಯಾಕ್ಟರನಲ್ಲಿ ಮೆರವಣಿಗೆ ಮಾಡಿ ಗೌರವಿಸಿ ಸಂಭ್ರಮಿಸಿದ್ದಾರೆ.