
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಸಮಾಜ ಸೇವಕ ಹಾಗೂ ಬಡವರ ಬಂಧು ಎಂದೇ ಖ್ಯಾತಿ ಪಡೆದಿದ್ದ ದಿ. ನಟರಾಜ್ ಕುಮಾರ್ ಅವರ ಸುಪುತ್ರ ಯುವ ಮುಖಂಡ ಪುನೀತ್( ಚಿನ್ನು) ರವರ ಜನ್ಮದಿನವನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಗ್ಲೀಟರ್ ಎಂಬ ಚಿತ್ರಕಲೆಯ ಭಾವಚಿತ್ರ ಬಿಡಿಸುವ ಮುಖಾಂತರ ಆಚರಿಸಿದರು
ಈ ವೇಳೆ ಭಾಗವಹಿಸಿ ಜನ್ಮದಿನದ ಶುಭ ಕೋರಿ ಮಾತನಾಡಿದ ರಾಜಗೋಪಾಲ್ ನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷ ಬಿ ಜಗದೀಶ್ ಕುಮಾರ್ ಮಾತನಾಡಿ ಈ ತಂತ್ರಜ್ಞಾನದ ಡಿಜಿಟಲ್ ಯುಗದಲ್ಲಿ ಮಾನವ ನಿರ್ಮಿತ ಚಿತ್ರಕಲೆಗಳು ಅಳಿವು ಉಳಿವಿನ ಹಂಚಿಗೆ ತಲುಪಿದ್ದು ಚಿತ್ರ ಬಿಡಿಸುವ ಕಲಾವಿದರಿಗೆ ಹೆಚ್ಚಿನದಾಗಿ ಪ್ರೋತ್ಸಾಹಿಸುವ ಸಲುವಾಗಿ ಗ್ಲೀಟರ್ ಪೇಂಟಿಂಗ್ ಚಿತ್ರಕಲೆಯ ಮುಖಾಂತರ ಕೇವಲ ಐದು ನಿಮಿಷದಲ್ಲಿ ಎರಡು ಭಾವಚಿತ್ರಗಳನ್ನು ರಚಿಸಿ ನೋಡುಗರ ಮನಸೂರೆ ಗೂಳಿಸಿದ ಕಲಾವಿದನಿಗೆ ಅಭಿನಂದಿಸಬೇಕು ಏಕೆಂದರೆ ಚುಕ್ಕಿ ಇಟ್ಟು ರಂಗೋಲಿ ನಿರ್ಮಿಸುವುದೇ ಕರಾರುವಕ್ಕಾಗಿ ಇರುವುದಿಲ್ಲ ಆದರೆ ಕೇವಲ ಐದು ನಿಮಿಷದಲ್ಲಿ ಎರಡು ಭಾವಚಿತ್ರಗಳನ್ನು ರಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಮುಂದಿನ ದಿನಗಳಲ್ಲಿ ಇಂತಹ ಚಿತ್ರ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಹಿರಿಯ ಮುಖಂಡ ಬೋಜ್ ರಾಜ್, ಶ್ರೀಮತಿ ಗಂಗಮ್ಮ ಭೋಜ್ ರಾಜ್, ಮಾಜಿ ಗ್ರಾಮ್ ಪಂಚಾಯ್ತಿ ಅಧ್ಯಕ್ಷೆ ಭವ್ಯ ದೇವೇಂದ್ರ ಕುಮಾರ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ದೇವೇಂದ್ರ ಕುಮಾರ್ ,ಮಹಿಳಾ ಮುಖಂಡರಾದ ಮಂಜುಳ, ಸ್ವಾತಿ ಜಗದೀಶ್ ಕುಮಾರ್, ಸ್ಥಳೀಯ ಮುಖಂಡರಾದ ಕೆಪಿಸಿಸಿ ನರಸಿಂಹಮೂರ್ತಿ, ಕಾಂಗ್ರೆಸ್ ಕಾರ್ಮಿಕ ವಿಭಾಗದ ಭೈರವ ಗೌಡ, ಮಂಜುನಾಥ್, ಕುಮಾರ್ ಮಂಜಯ್ಯ ,ಇನ್ನು ಹಲವಾರು ಸ್ಥಳೀಯ ಮುಖಂಡರ ಜೊತೆಗೆ ನೂರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದರು