
ನೆಲಮಂಗಲ : ತಾಲೂಕಿನ ಸೋಂಪುರದಲ್ಲಿ ಮಡಿವಾಳ ಸಂಘದ ರಾಜ್ಯ ಅಧ್ಯಕ್ಷ ನಂಜಪ್ಪ ಆಗಮಿಸಿ ಸಂಘದ ಸಂಘದ ರಾಜ್ಯ ಅಧ್ಯಕ್ಷ ನಂಜಪ್ಪ ಮಡಿವಾಳ ಜನಾಂಗದ ಕುಂದು ಕೊರತೆ ಬಗ್ಗೆ ತಿಳಿಯಲು ದಾಬಸ್ ಪೇಟೆಗೆ ಆಗಮಿಸಿದ್ದರು.
ರಾಜ್ಯದಲ್ಲಿ ಮಡಿವಾಳ ಸಂಘದವರು ನಮಗೆ ಸರಕಾರ ದಿಂದ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ ನಾವು ಅಲ್ಪಸಂಖ್ಯಾತರು ರಾಜ್ಯದಲ್ಲಿ ನಮ್ಮನ್ನು ಗುರುತಿಸಿಲ್ಲ ಆದ್ದರಿಂದ ರಾಜ್ಯದಲ್ಲಿ ನಮ್ಮ ಜನಾಂಗದ ಎಲ್ಲಾ ಸಂಘಟನೆಯವರು ಸರಕಾರಕ್ಕೆ ಮನವಿ ಮಾಡಬೇಕು.
ನಮ್ಮನ್ನು ಎಸ್ಸಿ ಜನಾಂಗಕ್ಕೆ ಸೇರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಕೊಡುವುದರ ಮುಖಾಂತರ ರಾಜ್ಯದಲ್ಲಿ ಈಗಾಗಲೇ ಪ್ರತೀ ತಾಲೂಕಿನಲ್ಲಿ ಹೋಬಳಿಗಳಲ್ಲಿ ಸಂಘವನ್ನು ಮಾಡಿದ್ದೇವೆ.
ರಾಜ್ಯ ಸರ್ಕಾರವು ನಮ್ಮನ್ನ ಎಸ್ಸಿ ಜನಾಂಗಕ್ಕೆ ಸೇರಿಸಿ ಕೊಳ್ಳದಿದ್ದರೆ ವಿಧಾನಸೌಧ ಮುಂದೆ ರಾಜ್ಯದಲ್ಲಿ ನಮ್ಮ ಜನಾಂಗದ ಸಂಘಟನೆಯನ್ನು ಕರೆದು ಧರಣಿ ಮಾಡುವುದಾಗಿ ಹೇಳಿದರು.
ಸೋಂಪುರ ಹೋಬಳಿ ಅಧ್ಯಕ್ಷ ಗಂಗಾಧರ ಮಾತನಾಡಿ ಈಗಾಗಲೇ ಸೋಂಪುರದಲ್ಲಿ ಮಡಿವಾಳ ಸಂಘದ ಮೂರು ಶ್ರೀಶಕ್ತಿ ಗುಂಪನ್ನು ಕೂಡ ಮಾಡಿದ್ದೇವೆ. ಜನಾಂಗದ ಏಳಿಗೆಗಾಗಿ ನೆಲಮಂಗಲ ತಾಲೂಕಿನಲ್ಲಿ ನಮ್ಮ ಜನಾಂಗ ಪ್ರತಿ ಹೋಬಳಿಯಲ್ಲೂ ಸಂಘ ಸ್ಥಾಪನೆ ಮಾಡಿದ್ದೇವೆ. ಸರಕಾರದಿಂದ ಏನು ಸವಲತ್ತುಗಳು ನಮಗೆ ಸಿಗುತ್ತಿಲ್ಲ ಆದ್ದರಿಂದ ರಾಜ್ಯಾಧ್ಯಕ್ಷರ ತೀರ್ಮಾನದಂತೆ ನಾವು ಕೂಡ ಬದ್ಧರಾಗಿರುತ್ತೇವೆ.
ರಾಜ್ಯದ ಪದಾಧಿಕಾರಿ ಆದ ಭವ್ಯ ರಾಜಣ್ಣ ವೆಂಕಟರಮಣಪ್ಪ ಸಾಗರ್ ಆಗಮಿಸಿದ್ದರು ತಾಲ್ಲೂಕು ಉಪಾಧ್ಯಕ್ಷ ಭೀಮರಾಜ್ ಸೋಂಪುರ ಸೋಂಪುರ ಹೋಬಳಿ ಅಧ್ಯಕ್ಷ ಗಂಗಾಧರ್ ಹೋಬಳಿಯ ಉಪಾಧ್ಯಕ್ಷ ಶ್ರೀನಿವಾಸ್ ರಮೇಶ್ ಮನು ಕಿಶೋರ್ ಹಾಗೂ ಮುಖಂಡರುಗಳು ಆಗಮಿಸಿದ್ದರು
ವಿಕಾಸ್ ನೆಲಮಂಗಲ ರಿಪೋರ್ಟರ್