April 19, 2025

ಹುಬ್ಬಳ್ಳಿ ರಾಜ್ಯ ಸರ್ಕಾ ಮುಂದಾಲೋಚನೆ ಇಲ್ಲದೇ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಈಗ ಅದರ ಆರ್ಥಿಕ ಹೊರೆ ತಡೆಯಲು ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿ, ಜನರ ಜೇಬಿಗೆ ನೇರವಾಗಿ ಕತ್ತರಿ ಹಾಕಿದೆ ಎಂದು ಹೇಳುವ ಮೂಲಕ ಸರ್ಕಾರದ ಡಿಸೇಲ್ – ಪೆಟ್ರೋಲ್ ಬೆಲೆ ಏರಿಕೆ ವಿರುದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದರು.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಾಗಿ ಖಜಾನೆಯಿಂದ ದುಡ್ಡು ಖರ್ಚು ಮಾಡಲಾಗ್ತಿದೆ. ದಿನನಿತ್ಯಡ ಆಡಳಿತ ವ್ಯವಸ್ಥೆ ರಾಜ್ಯದಲ್ಲಿ ಕುಸಿದು ಹೋಗಿದೆ. ಗ್ಯಾರೆಂಟಿಯಿಂದ ಉಚಿತ ಕೊಡ್ತೇವೆ ಅಂತಾ ದರ ಏರಿಕೆ ಮಾಡಿ ಜನಸಾಮಾನ್ಯರ ಜೇಬಿಗೆ ಹೊರೆ ಆಗಿದೆ. ಜನತೆ ಜಾಗತಿಕ ಯುದ್ಧ, ತೀವ್ರ ಬರಗಾಲದಿಂದ ಸಂಕಷ್ಟ ಎದರುಸುತಿದ್ದಾರೆ, ಇದರ ಮಧ್ಯ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಾಸ್ನೆ ಮಾಡಿದರು. ‌ಇನ್ನು ಅನೇಕ ಕಡೆ ಬೆಳೆಗಳು ಸರಿಯಾಗಿ ಬಂದಿಲ್ಲ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಯಿತು. ಸರಿಯಾದ ರೀತಿಯಲ್ಲಿ ಪೂರೈಕೆ ಇರದ ಕಾರಣ ಆಹಾರ ಧಾನ್ಯ ಸಿಗಲಿಲ್ಲ ಈಗಲೂ ಸಿಗತಾ ಇಲ್ಲ. ನೈಸರ್ಗಿಕವಾಗಿ ಅದು ಆಗಿದ್ದು. ಇನ್ನು ರಾಜ್ಯ ಸರ್ಕಾರ‌ಈಗ ಮಾನವ ನಿರ್ಮಿತವಾದ ಪೆಟ್ರೋಲ್ ಡಿಸೇಲ್ ಬೆಲೆ ಜಾಸ್ತಿ ಮಾಡಿದೆ. ಈಗ ಪೆಟ್ರೋಲ್ ಮೂರುವರೆ ರೂಪಾಯಿ ಜಾಸ್ತಿ ಮಾಡಿದ್ದಾರೆ.‌ ಇದರಿಂದ ಬಸ್ ದರ, ಹಾಲಿನ ದರ, ಅಕ್ಕಿ, ಎಲ್ಲವೋ ಹೆಚ್ಚಾಗುತ್ತದೆ. ಸರ್ಕಾರದ ಬಡ ವಿರೋಧ ನೀತಿಯನ್ನು ನಾನು ವಿರೋಧಿಸುತ್ತೇನೆ.

ಇನ್ನೊಂದು ಸಂಗತಿ ಎಂದರೆ ಗ್ಯಾರಂಟಿ ಗ್ಯಾರಂಟಿ ಎಂದರು ಜನರು ತಿರಸ್ಕಾರ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸಿದ್ದಾರೆ. ಇದರ ದ್ವೇಷ ಸಾಧಿಸುವುದಕ್ಕಾಗಿಯೇ ಈ ರೀತಿ ಬೆಲೆ ಏರಿಕೆ ಮಾಡಿದ್ದಾರೆ. ಜನಸಾಮಾನ್ಯರ ಮೇಲೆ ಈ ರೀತಿ ಸಿಟ್ಟು ತೀರಿಸಿಕೊಳ್ಳುವುದು ಸರಿಯಲ್ಲ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಂಡಿದ್ದಾರೆ. ರಾಜ್ಯ ಸರ್ಕಾರದ ಹಿಂದೆ ಬೆಲೆ ಏರಿಕೆ ವಿರುದ್ಧ ಶವ ಯಾತ್ರೆ ಮಾಡಿದ್ದರು. ಈಗ ಅವರೇ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದಾರೆ, ಅವರೇ ಅಧಿಕಾರಕ್ಕೆ ಬಂದ ದಿನದಿಂದ ಬೆಲೆಗಳ‌ಏರಿಕೆ ಹಿಂದೆ ಬಿದಿದ್ದಾರೆ. ಈ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆಯ ವಿರುದ್ಧ ನಾವು ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದು ಎಂದು ಇದೇ ವೇಳೆ ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!