
ಧಾರವಾಡ
ಕರ್ಕಶ ಶಬ್ದ ಹೊರ ಬೀಡುತ್ತಿದ್ದ ಬೈಕ್‌ಗಳ ವಿರುದ್ಧ ಕಳೆದೆರಡು ತಿಂಗಳಿಂದ ಕಾರ್ಯಾಚಾರಣೆ ನಡೆಸಿ ವಶಕ್ಕೆ ಪಡೆದಿದ್ದ ಬೈಕ್ ಸೈಲೆನ್ಸರ್‌ಗಳ ಮೇಲೆ ಇಂದು ಧಾರವಾಡ ಸಂಚಾರಿ ಪೊಲೀಸರು ರೋಡ್ ರೂಲರ್ ಬಳಸಿ ಸಾರ್ವಿನಿಕವಾಗಿಯೇ ನಾಶ ಮಾಡಿ ಖಡಕ್ ಎಚ್ಚರಿಕೆ ನೀಡಿದರು.
ಧಾರವಾಡ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಕಳೆದೆರಡು ತಿಂಗಳಿಂದ ಕರ್ಕಶ ಶಬ್ದ ಹೊರಬೀಡುತ್ತಿದ್ದ ಬೈಕ್ ಸೈಲೆನ್ಸರ್ ವಿರುದ್ಧ ಕಾರ್ಯಾಚರಣೆ ನಡೆಸಿ, ದಂಡದ ಜೊತೆಗೆ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆಯಲಾಗಿತ್ತು. ಹಾಗೇ ವಶಕ್ಕೆ ಪಡೆದ ಸೈಲೆನ್ಸರ್‌ಗಳನ್ನು ಇಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಹಾಗೂ ಡಿಸಿಪಿಗಳಾ ರವೀಶ ಸಿ ಆರ್, ಕುಶಾಲ ಚೌಕ್ಸೆ, ಧಾರವಾಡ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಸಮ್ಮುಖದಲ್ಲಿ ರೋಡ್ ರೂಲರ್ ಹರಿಸಿ ನಾಶ ಮಾಡಲಾಯಿತು. ಇನ್ನೂ ಸಾರ್ವಜನಿಕ ಸ್ಥಳದಲ್ಲಿಯೇ ನಾಶ ಮಾಡುವ ಮೂಲಕ ಪುಡಾರಿ ಬೈಕ್ ಸವಾರರಿಗೆ ಧಾರವಾಡ ಸಂಚಾರಿ ಠಾಣೆಯಿಂದ ಖಡಕ್ ಸಂದೇಶ ರವಾನಿಸಲಾಗಿದೆ.