April 18, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ವಿಧಾನಸಭಾ ಕ್ಷೇತ್ರದ ರಾಜಗೋಪಾಲ್ ನಗರ ವಾರ್ಡಿನ ಭೈರವೇಶ್ವರ ನಗರದಲ್ಲಿ ನಗರ ದೇವತೆಗಳಾದ ದುಗ್ಗಲಮ್ಮ , ಅಣ್ಣಮ್ಮ ಹಾಗೂ ಸರ್ಕಲ್ ಮಾರಮ್ಮ ದೇವಿಯರನ್ನು ಕರೆಸಿ ಗ್ರಾಮ ಕ್ಕೆ ಒಳ್ಳೆಯದಾಗಲಿ ಎನ್ನುವ ನಿಟ್ಟಿನಲ್ಲಿ ಮೂರು ದಿವಸ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭರ್ಜರಿಯಾಗಿ ಊ ರ ಹಬ್ಬ ಆಚರಿಸಲಾಯಿತು. ಶ್ರೀರಾಮ ಟೂರ್ಸ್ ಅಂಡ್ ಟ್ರಾವೆಲ್ಸ್ ಮಾಲೀಕರಾದ ಹನುಮಂತ್ರಾಜು ನೇತ್ರತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಹನುಮಂತ್ರಾಜೆ ಅವರು ಶತಾಯಗತಾಯ ಟಿಕೆಟ್ ತಂದು ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ . ಇವರ ಜೊತೆಗೆ ಮೋಹನ, ರಘು, ಬಿಟಿಎಂ ಲೇಔಟ್ ರಾಜು ಇತರರ ಸಹಕಾರ ಜೊತೆಗೆ ವಾರ್ಡಿನಲ್ಲಿ ಓಡಾಡುತ್ತಿರುವುದು ಜೊತೆಗೆ ಸಂಚಲನ ಮೂಡಿಸುತ್ತಿದ್ದಾರೆ . ಇದೇ ವೇಳೆ ಅನ್ನದಾನ ಕಾರ್ಯಕ್ರಮದಲ್ಲಿ ಮಾಜಿ ನಗರಸಭಾ ಅಧ್ಯಕ್ಷ ಅಂದಾನಪ್ಪನವರು ಭಾಗವಹಿಸಿ ಜನತೆಗೆ ಪ್ರಸಾದ ವಿತರಣೆ ಮಾಡಿಸಿದರು . ಇದೇ ವೇಳೆ ಪ್ರತಿಷ್ಠಿತ ಡ್ಯಾನ್ಸ್ ತಂಡಗಳು ಹಾಗೂ ರಸಮಂಜರಿ ಹಾಡುಗಳಿಂದ ಜನತೆಗೆ ಆನಂದವನ್ನು ತಣಿಸಿದರು . ನಂತರ ಕಾಂಗ್ರೆಸ್ ಮುಖಂಡರಾದ ರುದ್ರೇಗೌಡರು , ಮಾಜಿನಗರ ಸಭಾ ಸದಸ್ಯ ಶಿವಣ್ಣ ,ಜೆಡಿಎನ್ ಬಿ ಜಗದೀಶ್ ಕುಮಾರ್ , ಫೈನಾನ್ಸ್ ತಿಮ್ಮರಾಜು , ಬಿಜೆಪಿ ಮುಖಂಡರಾದ ದಿನೇಶ್, ಹರೀಶ್ , ಬಿಟಿಎಂ ಲೇಔಟ್ ರಾಜು, ರಘು , ಮೋಹನ್, ಸಿದ್ದಪ್ಪ, ಪ್ರಶಾಂತ್,ಚರಣ್ ಶಾಂತರಾಜು , ಮುರುಗಣ್ಣ, ಸಿದ್ದಪ್ಪ, ಗಿರೀಶ್, ರಾಮಣ್ಣ, ಶಂಕ್ರಪ್ಪ , ಕಿರಣ್, ಫೈನಾನ್ಸ್ ತಿಮ್ಮರಾಜು ,ರಮೇಶ್ ಇನ್ನಿತರ ಅಕ್ಕಪಕ್ಕದ ಮುಖಂಡರು ಕಾರ್ಯಕರ್ತರು ಭಕ್ತರು ಆಗಮಿಸಿದ್ದರು . ಭಾನುವಾರ ಸಂಜೆ ಮುತ್ತಿನ ಪಲ್ಲಕ್ಕಿಯಲ್ಲಿ ದುಗ್ಗಲಮ್ಮ , ಅಣ್ಣಮ್ಮ ಹಾಗೂ ಸರ್ಕಲ್ ಮಾರಮ್ಮ ದೇವಿಯರನ್ನು ಪ್ರಮುಖ ಮುಖ್ಯಬೀದಿಗಳಾದ ಭೈರವೇಶ್ವರನಗರ, ಲವಕುಶನಗರ, ರಾಜೇಶ್ವರಿ ನಗರ, ಜಿಕೆ ಡಬ್ಲ್ಯೂ ಲೇಔಟ್, ಶಾಂಭವಿ ನಗರ , ಫ್ರೆಂಡ್ಸ್ ಸರ್ಕಲ್ , ರಾಜಗೋಪಾಲ್ ನಗರ, ಗಣಪತಿನಗರ ಪೀಣ್ಯ ಎರಡನೇ ಹಂತ ವಿವಿಧ ರೀತಿಯ ತಮಟೆ ವಾಲಗ ಡೊಳ್ಳು ಕುಣಿತ ಹಲವಾರು ಕಲಾತಂಡಗಳಿಂದ ಮೆರವಣಿಗೆ ಮೂಲಕ ಭರ್ಜರಿಯಾಗಿ ಸಂಚರಿಸಿ ಊರಾ ಹಬ್ಬ ಆಚರಿಸಿದರು

ಇದೇ ಸಂದರ್ಭದಲ್ಲಿ ಮಲ್ಲೇಶ ಚಂದ್ರಕಾಂತ್, ನಾಗರಾಜ್, ರಾಮು, ಸಾವಿತ್ರಮ್ಮ , ಕಮಲಮ್ಮ, ರಾಧಮ್ಮ , ಅಕ್ಕ ಪಕ್ಕದ ಗ್ರಾಮಸ್ಥರು ನಾಗರಿಕರು ಮಹಿಳೆಯರು ಮತ್ತು ಮಕ್ಕಳು ಉಪಸ್ಥರಿದ್ದರು.

  •  ಬಸವರಾಜ್ ಜಮಾದಾರ್
  •  ಬೆಂಗಳೂರು

Leave a Reply

Your email address will not be published. Required fields are marked *

error: Content is protected !!