April 16, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ‌: ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿಯಿಂದ ಹೊಸೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಎಪಿಜಿ ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ಪದವಿ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಂಗಳೂರಿನ ಪೀಣ್ಯ ದಾಸರಹಳ್ಳಿ ನಗರ ದಲ್ಲಿ ವಾಸವಾಗಿರುವ ಇವರು ಅನೇಕ ವರ್ಷಗಳಿಂದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ ಸಮಾಜ ಸೇವೆ ಮಾಡಿಕೊಂಡಿದ್ದು ಹಾಗು ಉತ್ತಮ ಒಳ್ಳೆಯ ವ್ಯಕ್ತಿಯಾಗಿದ್ದು ಸಾಮಾಜಿಕವಲಯದಲ್ಲಿನ ಸೇವೆಯನ್ನು ಗುರುತಿಸಿ ಎಪಿಜೆ ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಅವರು ನನ್ನ ಸ್ನೇಹಿತರ ಹಾಗೂ ಹಿತೈಷಿಗಳ ಸಹಕಾರದಿಂದ ನಾನು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು, ಅರ್ಥಿಕವಾಗಿ ಹಿಂದುಳಿದವರನ್ನು ಸಮಾಜದಲ್ಲಿ ಅರ್ಥಿಕವಾಗಿ ಸದೃಡಗೊಳಿಸುವ ಕಾರ್ಯವನ್ನು ಗುರುತಿಸಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯುನಿವರ್ಸಿಟಿಯವರು ನನಗೆ ಎಪಿಜೆ ಅಬ್ದುಲ್ ಕಲಾಂ ರಾಜ್ಯ ಪ್ರಶಸ್ತಿ ಪದವಿಯನ್ನು ನೀಡಿದ್ದು ತುಂಬಾ ಖುಷಿಯಾಗಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡು ಬಡವರಿಗೆ ಹಾಗೂ ಕಾರ್ಮಿಕರಿಗೆ ಸಹಾಯ ಮಾಡಿ ಅವರ ಉನ್ನತಿಗೆ ದುಡಿಯುತ್ತೇನೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಏಷ್ಯಾ ಇಂಟರ್ನಾಷನಲ್ ಕಲ್ಚರಲ್ ಅಕಾಡೆಮಿಯ ಸಂಸ್ಥಾಪಕ ರಾದ ಬಾಬು ವಿಜಯನ್, ಚನ್ನ ಬಸವರಾಧ್ಯ ಸ್ವಾಮೀಜಿ, ಆಂಧ್ರಪ್ರದೇಶದ ನಿವೃತ್ತ ,, ನ್ಯಾಯಮೂರ್ತಿಗಳಾದ ತುಳಸಿ ದಾಸ್ ತಮಿಳುನಾಡಿನ ಮಾಜಿ ಶಾಸಕ ಮನೋಕರನ್,ಡಾ.ಎಸ್ಎನ್ ರಾಜೇಶ್,ಪೂಜ್ಯ ಶಿವಲಿಂಗಯ್ಯ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!