
ಬೆಳಗಾವಿ
ಕಣಗಲಾ ಗ್ರಾಮ ಪಂಚಾಯತಿಯಲ್ಲಿ ಸಂಜೆ ವೇಳೆಗೆ ಮೇಣದಬತ್ತಿ ಮುಖಾಂತರ ಗ್ರಾಮದ ಜನರಲ್ಲಿ ಮತದಾನ ಜಾಗೃತಿ ಮಾಡಲಾಯಿತು.
ಕಣಗಲಾ ಗ್ರಾಮ ಪಂಚಾಯತಿಯ ಬಸವ ವೃತ್ತದಲ್ಲಿ ಮೇಣದಬತ್ತಿ ಹಚ್ಚುವ ಮುಖಾಂತರ ಕಣಗಲಾ ಗ್ರಾಮದ ಜನರಲ್ಲಿ ಮತದಾನ ಜಾಗೃತಿ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸಿಬ್ಬಂದಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿ ಮತದಾನ ಜಾಗೃತಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಪ್ರತಿ ಮನೆ ಮನೆಗೂ ಮತದಾನ ಮಾಡುವ ಮಹತ್ವವನ್ನು ವಿವರಿಸಿದರು.