
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ : ಕ್ಷೇತ್ರದ ರಾಜಗೋಪಾಲನಗರ ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಗದೀಶ್ ಕುಮಾರ್ ಅವರು ಹೋಳಿಹಬ್ಬ ಹಾಗೂ ಹುಣ್ಣಿಮೆ ಪ್ರಯುಕ್ತ ರಾಜಗೋಪಾಲನಗರದ ಗ್ರಾಮ ದೇವತೆ ಶ್ರೀ ದುಗ್ಗಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗ ಮಾಡಿದರು.
ಇದೆ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆಯುತ್ತಿರುವ ಎಲ್ಲಾ ಶಾಲಾ ಮಕ್ಕಳು ಶ್ರಮವಹಿಸಿ ಓದಿ ಉತ್ತಮ ಗುಣಮಟ್ಟದ ಫಲಿತಾಂಶವನ್ನು ಪಡೆದುಕೊಳ್ಳಲಿ ಹಾಗೂ ನಾಡಿನ ಜನತೆಗೆ ಹೋಳಿ ಹಬ್ಬದ ಶುಭಾಶಯ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಗಂಗಮ್ಮ ಭೋಜ್ ರಾಜ್, ಚಿಕ್ಕಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಭವ್ಯ ದೇವೇಂದ್ರ ಕುಮಾರ್, ಕೆಪಿಸಿಸಿನರಸಿಂಹಮೂರ್ತಿ, ರಮೇಶ್,ಚಂದ್ರಮ್ಮ,ಕಿರಣ್, ರಾಜು,ಮಂಜುನಾಥ್, ಶ್ರೀನಿವಾಸ್ ಹಾಗೂ ಜೆ ಡಿ ಎನ್ ಕುಟುಂಬಸ್ಥರು ಪೂಜೆಯಲ್ಲಿ ಭಾಗವಹಿಸಿದ್ದರು.