April 19, 2025

ಪಬ್ಲಿಕ್ ರೈಡ್ ನ್ಯೂಸ್

ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರು ಧಾರವಾಡ ಲೋಕಸಭಾ ಕ್ಷೇತ್ರದಿಂದ 3 ಲಕ್ಷ ಲೀಡನಲ್ಲಿ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ. ಅಷ್ಟೊಂದು ವಿಶ್ವಾಸದಿಂದ ಗೆಲ್ಲುವಿನ ಲೀಡ್ ಹೇಳ್ತಾರೆ ಅಂದ್ರೇ, ಇವಿಎಂ ಮಷಿನ್ ಗದ್ದಲ ಏನಾದರೂ ಅವರು ಮಾಡಬಹುದು ಎಂದು ಮೂಲಕ ಧಾರವಾಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಟಾಂಗ್ ನೀಡಿದರು.

ಧಾರವಾಡದ ಖಾಸಗಿ‌ ಹೋಟೆನಲ್ಲಿ ಕ್ಷೇತ್ರದ ಕಾಂಗ್ರೆಸ್‌ನ ಪದಾಧಿಕಾರಿಗಳು ಸಭೆಗೂ ಮುನ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡ ಲೋಕಸಭಾ ಮತದಾರರು ತುಂಬಾ ಪ್ರಜ್ಞಾವಂತರಿದ್ದಾರೆ. ಕ್ಷೇತ್ರದ ಮತದಾರರು ಈಗ ಬದಲಾವಣೆ ಬಯಸುತ್ತಿದ್ದಾರೆ. ಈಗ ಇದು ಬಿಜೆಪಿ‌ ಭದ್ರಕೋಟೆ ಅಂತಾರೆ, ಇದೇ ಕ್ಷೇತ್ರ‌ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ, ನಡೆದಿದೆ. ಗ್ಯಾರಂಟಿ ಯೋಜನೆಗಳ ಪರಿಣಾಮವೂ ಆಗಲಿದೆ ಈ ಚುನಾವಣೆಯಲ್ಲಿ ಕಾಣುತ್ತದೆ. ಆಶ್ವಾಸನೆಯಂತೆ ಗ್ಯಾರಂಟಿ ನಡೆಸಿಕೊಟ್ಟಿದ್ದೇವೆ ಹಾಗಾಗಿ ಗೆಲ್ಲುವ ವಿಶ್ವಾವಿದೆ ಎಂದರು. ‌

ಮೋದಿ ಅಲೆ ಇದೆ ಅಂತಾರೆ. ಹತ್ತು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಆಗಿದೆ. ಅಂದು ಮೋದಿ ನಮ್ಮ ರಾಜ್ಯಕ್ಕೆ ಬಂದು ಹೋಗಿದ್ದರು. ಆದರೂ ನಮ್ಮ ಪಕ್ಷ 135 ಸ್ಥಾನ ಗಳಿಸಿದೆ. ಅಂದು ಜನರ ಆರ್ಶೀವಾದದಿಂದ ಈಗ ಕಾಂಗ್ರೆಸ್ ಸರ್ಕಾರ ಅಡಳಿತ ನಡೆಸುತ್ತಿದೆ. ಅಲ್ಲದೆ ನನ್ನ ಟಿಕೆಟ್ ಬಗ್ಗೆ ಹೇಳುವುದ್ದಾರೆ, ನಾನು ಈ ಹಿಂದೆ ಮೊದಲು ನಾನು ಟಿಕೆಟ್ ಗೆ ಅರ್ಜಿ ಹಾಕಿರಲಿಲ್ಲ. ಬಳಿಕ ಕೆಪಿಸಿಸಿ ಅಧ್ಯಕ್ಷರ ಮೂಲಕ ಅರ್ಜಿ ಹಾಕಿದ್ದೆ. ಅದರಂತೆ ಪಕ್ಷದ ಕಾರ್ಯಕರ್ತನಾಗಿರುವ ನಾಯಕರು ನನಗೆ ಟಿಕೆಟ್ ನೀಡಿದ್ದಾರೆ. ಕ್ಷೇತ್ರದ ಎಲ್ಲರ ಮಾರ್ಗದರ್ಶನ ಆರ್ಶೀವಾದ ಪಡೆದುಕೊಂಡು ಚುನಾವಣೆ ಎದುರಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!