
ಪಬ್ಲಿಕ್ ರೈಡ್ ನ್ಯೂಸ್
ಧಾರವಾಡ: ಕೌಟಂಬಿಕ ಜೀವನದಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣು ಬಿಗಿದಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಕಲಘಟಗಿ ರಸ್ತೆಯ ಕಕ್ಕಯ್ಯ ನಗರದಲ್ಲಿ ನಡೆದಿದೆ.
ವೈ- ಧಾರವಾಡ ಕಲಘಟಗಿ ರಸ್ತೆಯ ಕಕ್ಲಯ್ಯ ನಗರದಲ್ಲಿ ದುರ್ಘಟನೆ ನಡೆದಿದ್ದು, ನಲವತ್ತು ವರ್ಷದ ಗಣೇಶ್ ಹುತಗಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಗಣೇಶ ಕಕ್ಕಯ್ಯನಗರದ ನಿವಾಸಿಯಾಗಿದ್ದು, ಮೃತದೇಹ ನೋಡಿ ಸ್ಥಳೀಯರು ಬೆಚ್ಚಿಬಿದಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆಯ ಪೊಲೀಸ್ರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಸದ್ಯ ಸ್ಥಳೀಯರ ಸಹಾಯದಿಂದ ಮೃತದೇಹ ಕೆಳಗೆ ಇಳಿಸಿ, ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.