April 19, 2025

ಹುಬ್ಬಳ್ಳಿ: ಇವತ್ತು ಅಥವಾ ನಾಳೆ ಎರಡನೇ ಪಟ್ಟಿ ಬರಬಹುದು. ಸಿಇಸಿ ಮೀಟಿಂಗ್ ಆಗಬೇಕು ಹೀಗಾಗಿ ಸ್ವಲ್ಪ ತಡವಾಗ್ತಿದೆ. ಬಹುಷ್ಯ 18 ಕ್ಕೆ ಎರಡನೇ ಪಟ್ಟಿ ಬಿಡುಗಡೆ ಆಗಬಹುದು ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ನಗರದಲ್ಲಿಂದು ಮಾತನಾಡಿದ ಅವರು, ಚುನಾವಣೆ ಕೂಡ ಯಾವಗಾದರೂ ಘೋಷಣೆ ಆಗಬಹುದು. ಚುನಾವಣೆ ಆಯೋಗ ಕೂಡ ಇದೀಗ ಪ್ರಶ್ನೆಯಾಗಿದೆ. ಎಷ್ಟರ ಮಟ್ಟಿಗೆ ನಿಷ್ಪಕ್ಷಪಾತ ಕೆಲಸ ಮಾಡ್ತಿದೆ ಅನ್ನೋದ ಪ್ರಶ್ನೆಯಾಗಿದೆ. ಚುನಾವಣಾ ಆಯೋಗದ ಅಧಿಕಾರಿ ರಾಜೀನಾಮೆ ನೀಡಿರೋದು ಇದಕ್ಕೆಲ್ಲ ಕಾರಣ. ಮೋದಿ ಸರ್ಕಾರ ಬಂದ ಮೇಲೆ ನ್ಯಾಯಾಧೀಶರನ್ನು ಹೊರಹಾಕಿದ್ದಾರೆ. ಚುನಾವಣಾ ಆಯೋಗದಿಂದಲೂ ಹೊರ ಹಾಕಿದ್ದಾರೆ. ಹೀಗಾಗಿ ಅದು ನಿಷ್ಪಕ್ಷಪಾತ ಆಗೋಕೆ ಎಲ್ಲಿ ಸಾಧ್ಯ. ಸ್ವಾಯತ್ತ ಸಂಸ್ಥೆಗಳು ಬಿಜೆಪಿ ಅನುಸಾರ ನಡೆಯಬೇಕು.

ಇದು ದೇಶದಲ್ಲಿ ನಡೆಯುತ್ತಿದೆ. ಆಯೋಗ,ಸಂಸ್ಥೆ ಎಲ್ಲವೂ ಬಿಜೆಪಿ ಪರವಾಗಿದೆ. ಇದರಲ್ಲಿ ಚುನಾವಣಾ ಆಯೋಗವೂ ಒಂದು. ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ ಎಂದು ಪರೋಕ್ಷವಾಗಿ ಕುಟಕಿದರು, ಜೊತೆಗೆ‌ ದೇಶದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗ್ತಿದೆ‌. 6 ಸಾವಿರ ಕೋಟಿಗೂ ಅಧಿಕ ಹಣ ಬಿಜೆಪಿಗೆ ದೇಣಿಗೆ ಹೋಗಿದೆ. ಬಿಜೆಪಿ ಪಕ್ಷಕ್ಕೆ ಅನೇಕ ದೊಡ್ಡ ದೊಡ್ಡ ಕಂಪನಿಗಳು ದೇಣಿಗೆ ಕೊಟ್ಟಿವೆ. ಇದರಿಂದ ಸ್ಪಷ್ಟವಾಗಿ ಗೊತ್ತಾಗತಿದೆ. ಅನೇಕ ಕಂಪನಿಗಳ ಬಿಜೆಪಿಗೆ ದೇಣಿಗೆ ಕೊಟ್ಟಿದ್ದಾರೆ. ಇದು ಭ್ರಷ್ಟಾಚಾರದ ಪರಮಾವಾಧಿ. ಅತ್ಯಂತ ಭ್ರಷ್ಟ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ನಮ್ಮ‌ ಮುಂದೆ ಯಾರ ನಿಲ್ಲಬಾರದು ಅನ್ನೋದು ಇವರ ಉದ್ದೇಶ. ಪಕ್ಷಾಂತರ ಮಾಡಲು ಇಡಿ, ಐಟಿ ಉಪಯೋಗ ಮಾಡಿಕೊಳ್ತೀದಾರೆ. ಇವರಿಗೆ ಮಾತಡೋಕೆ ನೈತಿಕತೆ ಇಲ್ಲ. ಎಲ್ಲ ಕಡೆ ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ.

ದಿನವೂ ಕಾಂಗ್ರೆಸ್ ನಾಯಕರ ಮನೆ ಮೇಲೆ ರೇಡ್ ಆಗುತ್ತಿದೆ. ಈ ತರಹದ ವ್ಯವಸ್ಥೆ ದೇಶದಲ್ಲಿ ನಿರ್ಮಾಣವಾಗಿದೆ. ಚುನಾವಣಾ ಬಾಂಡ್ ನಿಂದ ಅನೇಕ ವಿಚಾರ ಹೊರ ಬರತ್ತೆ. ಅದನ್ನುಮುಚ್ಚಿ ಹಾಕಲು ಮೋದಿ ಸರ್ಕಾರ ಪ್ರಯತ್ನ ಮಾಡ್ತೀದೆ ಎಂದರು. ಇದೇವೇಳೆ ಯಡಿಯೂರಪ್ಪ ಪೊಕ್ಸೋ ಕೇಸ್ ವಿಚಾರದ ಬಗ್ಗೆ ನಾನು ಹೆಚ್ಚು ಮಾತಾಡಲ್ಲ, ಕಾನೂನು ತನಿಖೆ ಆಗಬೇಕು. ದೂರು ದಾಖಲಾದ ಕೂಡಲೇ ದೋಷಿ ನಿರ್ದೋಷಿ ಅಂತಾ ಹೇಳೋಕೆ ಅಗಲ್ಲ. ನಾವು ಯಾರನ್ನೂ ತೇಜೋವಧೆ ಮಾಡಬಾರದು. ಸರಿಯಾದ ತನಿಖೆಯಾಗಬೇಕು ಎಂದು ಹೇಳಿದರು. ‌ಅಲ್ಲದೆ ನಾವು ರಾಜ್ಯದಲ್ಲಿ ಸುಮಾರು 20 ಸೀಟ್ ಗೆಲ್ತೀವಿ. ಸುಮ್ನೆ ವಿಷಯ ಡೈವರ್ಟ್ ಮಾಡ್ತಾರೆ. ಇದೀಗ ಸಿಎಎ ತಗೊಂಡ ಬಂದರು. ಮೋದಿ ಬರೋವರೆಗೂ ದೇಶ ಏನು ಆಗಿರಲಿಲ್ಲವಾ. ಮೋದಿ ಬರೋವರೆಗೂ ದೇಶ ನರಕ ಆಗಿತ್ತು. ಇದೀಗ ಸ್ವರ್ಗ ಆಗಿದೆಯಾ.
ನಾವ ಏನ ಹೇಳಿದೀವಿ ಅದನ್ನು ಮಾಡ್ತೀದಿವಿ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿದೆ. ಬಿಜೆಪಿ ಸಂಸದರು ಅಧ್ಯಕ್ಷರ ಜೊತೆ ಸಂಪರ್ಕ ಇರಬಹುದು. ಸಿಲಿಂಡರ್ ದರ ಇಳಿಕೆ ವಿಚಾರ,‌ 100 ಇಳಿಕೆ ಮಾಡಿದ್ದಾರೆ.
ಮೋದಿಗೆ ನೈತಿಕತೆ ಇದ್ರೆ 1000 ಇಳಿಸಬೇಕಿತ್ತು. ಚುನಾವಣೆ ಮುಂಚೆ 100 ರೂಪಾಯಿ ಇಳಸೋದು ಜನ ಮರಳು ಮಾಡೋಕೆ. ಕೇವಲ 100 ಇಳಿಸೋದು ಯಾಕೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕ್ಯಾಂಡಿ ನಿಷೇಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವ ಈಗಾಗಲೇ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇವೆ. ಕಲರ್ ಬಳಸಬಾರದು ಅಂತಾ ಹೇಳಲಾಗಿದೆ.
ಜನ‌ ಕೂಡಾ ಜಾಗೃತಿಯಾಗಬೇಕು.
ಅಕಸ್ಮಾತ್ ಕಬಾಬ್ ನಲ್ಲೂ ಕಲರ್ ಬಳಸೋದು ಕಂಡು ಬಂದರೆ ಕ್ರಮ. ಗೋಬಿ ಮಂಚೂರಿಯನ್ ನಲ್ಲಿ ಕಲರ್ ಬಳಸದಂತೆ ಸೂಚನೆ ನೀಡಲಾಗಿದೆ. ಯಾರಾದರೂ ಆಕರ್ಷಕ ಕಲರ್ ಬಳಸಿದ್ರೆ ಕ್ರಮ ಕೈಗೊಳ್ಳಲಾಗುವದು ಎಂದರು.

ಮೈಸೂರಿನಲ್ಲಿ ಎರಡು ಮೂರು ಹೆಸರಿವೆ. ಇಷ್ಟರಲ್ಲಿ ಟಿಕೆಟ್ ಫೈನಲ್ ಆಗುತ್ತೆ. ಸಿದ್ದರಾಮಯ್ಯ ಕ್ಷೇತ್ರ ಅದು ಅಲ್ಲಿ ಕೆಲ ಹೆಸರಗಳು ರೇಸ್ ನಲ್ಲಿವೆ.
ಯತೀಂದ್ರ ಸ್ಪರ್ಧೆ ಮಾಡಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!