ಹುಬ್ಬಳ್ಳಿ, ಡಿ 30, 2025 :ಹೆಸ್ಕಾಂನ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರಗಳನ್ನು ಹೆಸ್ಕಾಂ ಆಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್ ಅವರು ವಿತರಿಸಿದರು.
ನಾಗವೇನಿ ಕಾಶಪ್ಪ ತಳವಾರ, ಶೃತಿ ಸುಭಾಸ ಬಳವಾಡ, ಶ್ರೀಶೈಲ ಬಸವರಾಜ ಗಚ್ಚಿನಕಟ್ಟಿ, ಚಂದ್ರಶೇಖರ ನಾಗಪ್ಪ ಭಜಂತ್ರಿ, ಪೂಜಾ ಸುರೇಶ ಮ್ಯಾಗೇರಿ, ನಿಕಹತ ಶಬ್ಬೀರಬಾದಶಾ ಶಿರೋಳ, ಬೇಬಿ ಕೌಸರ್, ಹರೀಶ ಮೋಹನ ಕುಬಕಡ್ಡಿ, ಮಾಧುರಿ ಹರೀಶ ತೆಗ್ಗಳ್ಳಿ ಹಾಗೂ ವಿಜಯಲಕ್ಷ್ಮೀ ಭೀಮಪ್ಪ ಕಾತ್ರಾಳ ಅವರಿಗೆ ನೇಮಕಾತ್ರಿ ಪತ್ರವನ್ನು ನೀಡಿ, ಇಲಾಖೆ ನಿಮಗೆ ನೀಡಿದ ಕೆಲಸವನ್ನು ಶ್ರದ್ಧೆ, ನಿಷ್ಠೆಯಿಂದ ನಿಭಾಯಿಸಿ ಎಂದು ತಿಳಿಸಿದರು.
