ಹುಬ್ಬಳ್ಳಿ
ನಿನ್ನೆ ನಡೆದ ನಮ್ಮ ಕಾರ್ಮಿಕರ ಹೋರಾಟ 4 ನೇ ದಿನಕ್ಕೆ ಮುಂದುವರೆದಿದ್ದು ಸಂಜೆ 5 ಘಂಟೆಗೆ ಹೋರಾಟದ ಸ್ಥಳಕ್ಕೆ ಮಾನ್ಯ ತಹಸೀಲ್ದಾರರು ಮತ್ತು ಉಪಕಾರ್ಯದರ್ಶಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅಧಿಕಾರಿಗಳು ಹಾಗೂ ಬೆಳಗಾವಿ ವಿಭಾಗದ ಉಪಕಾರ್ಮಿಕ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಮನವೊಲಿಸುವ ಪ್ರಯತ್ನ ಮಾಡಿದರಿಂದ ಕಾರ್ಮಿಕರೂ ಸಚಿವರು ಸ್ಥಳಕ್ಕೆ ಬರುವವರೆಗೂ ಹೋರಾಟ ಹಿಂದಕ್ಕೆ ಪಡೆಯುವದಿಲ್ಲ ಎಂದು ಪಟ್ಟು ಹಿಡಿದಾಗ ಕಾರ್ಮಿಕ ಸಚಿವರು ದಿ, 9 =8=2025 ರಂದು ಕಾರ್ಮಿಕ ಸಭೆ ಕರೆದು ಚರ್ಚೆ ಮಾಡಿ ಬೇಡಿಕೆಗಳನ್ನು ಈಡೇರಿಸುವದಾಗಿ ಭರವಸೆ ನೀಡಿದ್ದರಿಂದ ಹೋರಾಟ ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.

ಒಂದು ವೇಳೆ ಕಾರ್ಮಿಕ ಸಚಿವರು ಇದ್ದಕ್ಕೆ ವಿಳಂಬ ನೀತಿ ತೋರಿಸಿದಲ್ಲಿ ಮತ್ತೇ ಉಗ್ರವಾದ ಹೋರಾಟ ಮಾಡಲಾಗುವದು ಎಂದು ಕಾರ್ಮಿಕ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಈ ಸಮಯದಲ್ಲಿ ಕಾರ್ಮಿಕ ಮುಖಂಡರಾದ ಶಿವಕುಮಾರ್ ಬಂಡಿವಡ್ಡರ, ಅಶ್ವಥ್ ಮರೀಗೌಡರ್, ದುರಗಪ್ಪ ಚಿಕ್ಕತುಂಬಳ, ವಾಸು ಲಮಾಣಿ, ಎಸ್ ಪಿ ಕರಿಸೋಮನಗೌಡರ್, ಮುಸ್ತಾಕ್ ನದಾಫ್, ಲಕ್ಷ್ಮಣ ಗುಡಾರದ್, ಶಿವಾನಂದ ಅಸೂಟಿ, ದೇವೇಂದ್ರ ಕಾಲವಾಡ,ಶಿವು ರಾಟೋಡ್,ನಿಂಗಪ್ಪ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.
