
ಹುಬ್ಬಳ್ಳಿ
ವಕೀಲನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪ ಮಾಡಿರುವ ವಕೀಲ ಚಾಣಕ್ಯ ಜಡಿ.. ತನ್ನ ಮನೆಯ ಮುಂದೆ ಬಂದು ಸೆಟ್ಲಮೆಂಟ ನಿವಾಸಿ ಕಾಶಪ್ಪ ಬೀಜವಾಡ ಹಾಗೂ ಅವನ ತಾಯಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ತನ್ನ ಮೇಲೆ ಹಲ್ಲೆ ಮಾಡಿರುವ ಘಟನೆಯ ಕುರಿತು ದೂರು ನೀಡಲು ಹೋದಾಗ ಪ್ರತಿ ದೂರು ತೆಗೆದುಕೊಂಡು ಆರೋಪಿತನ ಮೇಲೆಯೆ ದೂರು ದಾಖಲಿಸಿವುದಾಗಿ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್ ಆರ್ ನಾಯಕ ಅವರ ವಿರುದ್ಧ ಹಾಗೂ ಕಾಶಪ್ಪ ಬೀಜವಾಡ ಮತ್ತು ಮಂಜುಳಾ ಬೀಜವಾಡ ಮೇಲೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರ ಮೊರೆ ಹೋಗಿದ್ದಾರೆ.ಈ ಘಟನೆಯು ದಿನಾಂಕ ಮೇ 1 ರಂದು ನಡೆದಿದೆ.
ಕೆಲ ದಿನಗಳ ಹಿಂದೆಯಷ್ಟೇ ಕಾಶಪ್ಪ ಬೀಜವಾಡ ಹಾಗೂ ಸ್ನೇಹಿತರ ಮೇಲೆ ಇದೆ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸಟೆಬಲರ ಕೆಲಸಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ ಪ್ರಕರಣ ದಾಖಲಾಗಿತ್ತು.
ಇದಲ್ಲದೆ ವಕೀಲರ ಸಂಘಕ್ಕೂ ಅರ್ಜಿ ಸಲ್ಲಿಸಿರುವ ಚಾಣಕ್ಯ ಜಡಿ ವಕೀಲರೆಲ್ಲರು ಸೇರಿ ಪ್ರತಿಭಟನೆ ಮಾಡುವ ಲಕ್ಶಣಗಳು ಕಂಡುಬರುತ್ತಿವೆ.
ಕಾನೂನು ಅರಿತ ವಕೀಲರಿಗೆ ಈ ರೀತಿ ಆದರೆ ತನ್ನ ಮೇಲೆ ಆದಂತಹ ಆಪಾದನೆಗಳ ಬಗ್ಗೆ ದೂರು ನೀಡಲು ಠಾಣೆಗೆ ಬರುವ ಜನ ಸಾಮಾನ್ಯರ ಗತಿ ಏನು ಅಂತ ಪ್ರಶ್ನೆ ಉದ್ಭವಿಸುವ ಸಂಗತಿ ಇದಾಗಿದೆ.
ವಿನಾಯಕ ಹರಿಜನ ಹುಬ್ಬಳ್ಳಿ