
ಧಾರವಾಡ
ಇಲ್ಲಿ ಸಿಗರೇಟ್ ಸೇದ ಬೇಡಿ ಎಂಬ ವಿಚಾರಕ್ಕೆ ಆರ್‌ಎಸ್‌ಎಸ್ ಕಾರ್ಯಕರ್ತ ಶಿರೀಶ್ ಬಳ್ಳಾರಿ ಹಾಗೂ ಅವರ ಮನೆಯವರ ಮೇಲೆ ಹಲ್ಲೆ ಮಾಡಿದ್ದ, ಇಬ್ಬರು ಮುಸ್ಲಿಂ ಯುವಕರು ಹಾಗೂ ಓರ್ವ ಅಪ್ರಾಪ್ತನನ್ನು ಧಾರವಾಡ ಶಹರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಧಾರವಾಡದ ಗಾಂಧಿಚೌಕ್ ಬಳಿ ಶಿರೀಶ್ ಅವರ ಮನೆ ಇದ್ದು, ಅಲ್ಲಿ ಕತ್ತಲೆ ಇರುವುದರಿಂದ ಅಲ್ಲಿಗೆ ಅನೇಕ ಯುವಕರು ಬಂದು ನಶೆ ಮಾಡುತ್ತಿದ್ದರು. ಮೊನ್ನೆ ಇದೇ ರೀತಿ ಶಿರೀಶ್ ಅವರ ಮನೆ ಬಳಿ ನಿಂತು ನಶೆ ಮಾಡುತ್ತಿದ್ದ ಈ ಮುಸ್ಲಿಂ ಯುವಕರಿಗೆ ಶಿರೀಶ್ ಅವರ ಮನೆಯ ಕದಕ್ಕೆ ಒದ್ದಿದ್ದಾರೆ.
ಕದಕ್ಕೆ ಏಕೆ ಒದೆಯುತ್ತಿದ್ದೀರಿ ಎಂದು ಶಿರೀಶ್ ಅವರು ಪ್ರಶ್ನೆ ಮಾಡಿದ್ದಕ್ಕೆ ಇಬ್ಬರು ಯುವಕರು ಹಾಗೂ ಓರ್ವ ಅಪ್ರಾಪ್ತ ಸೇರಿ ಶಿರೀಶ್ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಶಿರೀಶ್ ಅವರ ಮನೆಯ ಒಳಹೋಗಿ ವಸಂತ ಬಳ್ಳಾರಿ, ಜ್ಯೋತಿ ಹಾಗೂ ಚೈತ್ರಾ ಅವರ ಮೇಲೂ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ.
ಈ ಘಟನೆ ನಡೆದ ಮೇಲೆ ಆರ್‌ಎಸ್ಎಸ್ ಕಾರ್ಯಕರ್ತರು, ಮುಖಂಡರು ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಶಹರ ಠಾಣೆ ಎದುರು ಜಮಾಯಿಸಿ ಹಲ್ಲೆ ನಡೆಸಿದ ಮುಸ್ಲಿಂ ಯುವಕರನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಘಟನೆ ಸಂಬಂಧ ಶಹರ ಠಾಣೆಯಲ್ಲಿ ಶಿರೀಶ್ ಅವರು ದೂರು ಸಹ ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಸದ್ಯ ಮಲ್ಲೀಕ್ ರಿಹಾನ್, ಅಯಾನ್ ಅತ್ತಾರ ಹಾಗೂ ರಿಜ್ವಾನ್ ಮನಿಯಾರ್ ಎಂಬುವವರನ್ನು ಬಂಧಿಸಿದ್ದಾರೆ. ಇದರಲ್ಲಿ ಓರ್ವ ಅಪ್ರಾಪ್ತ ಕೂಡ ಇದ್ದಾನೆ.