
ಹುಬ್ಬಳ್ಳಿ
ಮನೆಯಲ್ಲಿ ಯಾರು ಇಲ್ಲದ ನೋಡಿದ ಖಧೀಮರು ಮನೆ ಬಾಗಿಲು ಹಾಗೂ ಲಾಕ್ ಮುರಿದು ಮನೆಯಲ್ಲಿದ್ದ 12 ತೊಲೆ ಬಂಗಾರ, ಬೆಳ್ಳಿ ಸೇರಿ ನಗದು ಹಣ ದೊಚ್ಚಿಕೊಂಡು ಖದೀಮ ಕಳ್ಳರು ಪರಾರಿಯಾಗಿರೋ ಘಟನೆ ಹುಬ್ಬಳ್ಳಿಯ ಗುಡಿಹಾಳ ರಸ್ತೆ ವಾಣಿ ಪ್ಲಾಟನಲ್ಲಿ ನಡೆದಿದ್ದು, ಮನೆ ಮಾಲೀಕರು ತಲೆ ಮೇಲೆ ಕೈ ಹೊತ್ತು ಕುರುವಂತಾಗಿದೆ.
ಹುಬ್ಬಳ್ಳಿಯ ವಾಣಿ ಪ್ಲಾಟ್‌ನಲ್ಲಿ ರಾತ್ರಿ ಕಳ್ಳತನ ನಡೆದಿದೆ. ಅಲ್ಲಾವುದ್ದೀನ್ ಎಮ್ ಲೊಂಡೆವಾಲೆ ಎಂಬುವವರ ಮನೆ ಕಳ್ಳತನವಾಗಿದ್ದು, ಮನೆಯವರು ರಾತ್ರಿ ಆಸ್ಪತ್ರೆಗೆಂದು ಹೋಗಿದ್ದಾರೆ. ಮರಳಿ ಬರೊವಷ್ಟರಲ್ಲಿ ಇಡೀ ಮನೆಯಲ್ಲಿನ ಚಿನ್ನಾಭರಣ ನಗದನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಮನೆಯಲ್ಲಿದ್ದ ಟ್ಯೂಜಿರಿ ಲಾಕರ್‌ಗಳನ್ನು ಮುರಿದು ಸುಮಾರು 12 ತೊಲೆ ಬಂಗಾರ, 60 ಗ್ರಾಮ ಬೆಳ್ಳಿ, 1,05000 ರೂ. ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ ಕೂಡಲೇ ಹಳೇ ಹುಬ್ಬಳ್ಳಿ ಪೊಲೀಸರು ರಾತ್ರಿವೇಳೆ ಬಂದು ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ 12 ತೊಲೆಯಲ್ಲಿ ಕೆಲವೊಂದಿಷ್ಟು ಬಂಗಾರದ ಆಭರಣಗಳನ್ನು ಮನೆಯ ಸುತ್ತಮುತ್ತ ಸಿಕ್ಕಿವೆ. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಮದುವೆ ಇರೊದಕ್ಕೆ ಇಷ್ಟೊಂದು ಬಂಗಾರ ತಂದಿಟ್ಟಿರುವುದಾಗಿ ಮಾಲೀಕ ಪೊಲೀಸರಿ ಮುಂದೆ ಹೇಳಿಕೊಂಡಿದ್ದಾನೆ. ಈಗ ಮದುವೆಗೆ ತಂದಿದ್ದ ಚಿನ್ನಾಭರಣ ಜತೆಗೆ ನಗದು ಕಳ್ಳತನಾವಾಗಿದ್ದರಿಂದ ಕುಟುಂಬ ಕಣ್ಣೀರು ಹಾಕುವಂತಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಹಳೇ ಹುಬ್ಬಳ್ಳಿ ಪೊಲೀಸರು ಖದೀಮ ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.