
ಧಾರವಾಡ
ಬಸ್ ನಿಲ್ದಾಣದ ಬಳಿ ನಿಂತಿದ್ದ ಮಹಿಳೆಯೊಬ್ಬರ ಕೈಯಲ್ಲಿದ್ದ ಪರ್ಸ್‌ನ್ನು ಕಳ್ಳನೊಬ್ಬ ಕಿತ್ತುಕೊಂಡು ಓಡುತ್ತಿದ್ದ ಗಮನಿಸಿ ಸ್ಥಳೀಯವಾಗಿದ್ದ ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿಯೊಬ್ಬರು ಕಳ್ಳನನ್ನು ಸಿನಿಮೀಯ ರೀತಿಯಲ್ಲಿ ಬೆನಟ್ಟಿ ಹಿಡಿದ ತಂದು ಖದ್ದ ಫರ್ಸ ಮಹಿಳೆಗೆ ಹಸ್ತಾಂತರ ಮಾಡಿದ ಘಟನೆ ಧಾರವಾಡ ಬಸ್ಸ ನಿಲ್ದಾಣ ಬಳಿ ನಡೆದಿದೆ.
ಧಾರವಾಡ ಸಂಚಾರಿ ಠಾಣೆಯ ಸಿಬ್ಬಂದಿ ಬೀರಪ್ಪ ನಾಟಿಕರ ಅವರು ಆ ಕಳ್ಳನನ್ನು ಬೆನ್ನಟ್ಟಿ ಸಮಯಪ್ರಜ್ಞೆ ಮೆರೆದಿದ್ದಾರೆ. ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಮಹಿಳೆ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದರು.
ಅವರು ತಮ್ಮ ಕೈಯಲ್ಲಿ 33 ಸಾವಿರ ರೂಪಾಯಿ ಇದ್ದ ಪರ್ಸ್ ಹಿಡಿದುಕೊಂಡು ನಿಂತಿದ್ದನ್ನು ಗಮನಿಸಿದ್ದ, ಐನಾತಿ ಕಳ್ಳ ಅದನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದ. ಪೊಲೀಸ್ ಸಿಬ್ಬಂದಿ ಬೀರಪ್ಪ ಅವರು ಆ ಕಳ್ಳನನ್ನು ಸುಮಾರು 1 ಕಿಲೋ ಮೀಟರ್‌ನಷ್ಟು ಬೆನ್ನಟ್ಟಿ ಹಿಡಿದು ಆ ಪರ್ಸ್‌ನ್ನು ಮರಳಿ ಆ ಮಹಿಳೆಗೆ ಹಸ್ತಾಂತರಿಸಿದ್ದಾರೆ. ಬೀರಪ್ಪ ಅವರ ಈ ಕರ್ತವ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.